ಡಿವಿಜಿಸುದ್ದಿ.ಕಾಂ,ದಾವಣಗೆರೆ: ನಗರದ ಪಿಬಿ ರಸ್ತೆಯಲ್ಲಿ ಮಟ ಮಟ ಮಧ್ಯಾಹ್ನವೇ ಬೈಕ್ ಸವಾರರಿಂದ ಹಣ ಪೀಕುತ್ತಿದ್ದ ಟ್ರಾಫಿಕ್ ಹೆಡ್ ಕಾನ್ ಸ್ಟೇಬಲ್ ರವಿ ಹಾಗೂ ಎಎಸ್ಐ ಜಯಣ್ಣ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅಮಾನತು ಮಾಡಿದ್ದಾರೆ.
ಬೈಕ್ ಸವಾರನಿಂದ ಆರನೂರು ರೂಪಾಯಿ ಹಣ ವಸೂಲಿ ಮಾಡಿದ್ದ ಟ್ರಾಫಿಕ್ ಪೊಲೀಸರಿಬ್ಬರು, ಯಾವುದೇ ರಶೀದಿ ನೀಡದೆ ಹಣ ವಸೂಲಿ ಮಾಡುತ್ತಿದ್ದರು.
ಈ ವಿಡಿಯೋವನ್ನು ಸಾರ್ವಜನಿಕರು ರಹಸ್ಯವಾಗಿ ವಿಡಿಯೋ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಇದರಿಂದ ಎಚ್ಚೆತ್ತ ಎಸ್ ಪಿ ಹನುಮಂತರಾಯ ಇಬ್ಬರು ಟ್ರಾಫಿಕ್ ಪೊಲೀಸರನ್ನು ಅಮಾನತು ಮಾಡಿದ್ದಾರೆ.



