ಡಿವಿಜಿ ಸುದ್ದಿ, ಬಳ್ಳಾರಿ: ಜಿಲ್ಲೆ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದ ಶಕ್ತಿದೇವತೆ ಉಚ್ಚಂಗೆಮ್ಮನ ದೇವಸ್ಥಾನದಲ್ಲಿ ಈ ಬಾರಿ ಸರಳ ದಸರಾ ಆಚರಿಸಲಾಗುತ್ತಿದೆ. ಅಕ್ಟೋಬರ್ 17 ರಂದು ಶನಿವಾರ ದೇವಿಯ ಪೂಜೆಯೊಂದಿಗೆ ಸರಳ ದಸರಾಕ್ಕೆ ಚಾಲನೆ ದೊರೆಯಿತು. ಭಾನುವಾರ ಹೂವಿನ ಅಲಂಕಾರ ಹಾಗೂ ಸೋಮವಾರ ತೆಂಗಿನ ಕಾಯಿ, ಮಂಗಳವಾರ ಬಾಳೆಹಣ್ಣಿನಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು.ಪ್ರತಿ ವರ್ಷ ವಿದ್ಯುತ್ ದೀಪಗಳಿಂದ ದೇವಿಯನ್ನು ಅಲಂಕಾರ ಮಾಡಲಾಗುತ್ತಿತ್ತು ಕರೋನ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಯಾವುದೇ ವೈಭವದ ಅಲಂಕಾರ ಮಾಡದೇ ಸರಳ ದಸರಾ ಆಚರಣೆಗೆ ತಾಲ್ಲೂಕು ಆಡಳಿತ ಕ್ರಮ ಕೈಗೊಂಡಿದೆ.




