ಡಿವಿಜಿ.ಕಾಂ, ದಾವಣಗೆರೆ: ರಾಜ್ಯದಲ್ಲಿನ ನೆರೆ ಪರಿಹಾರಕ್ಕೆ ಕೇಂದ್ರ ಸರ್ಕಾರ ಮಧ್ಯಂತರವಾಗಿ 1,200 ಕೋಟಿ ಬಿಡುಗಡೆ ಮಾಡಿದ್ದು, ಇನ್ನು ಹೆಚ್ಚಿನ ಅನುದಾನ ನೀಡಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.
ನಗರದ ರಾಮ ಅಂಡ್ ಕೋ ವೃತ್ತದಲ್ಲಿ ವಿಶ್ವ ಹಿಂದೂ ಪರಿಷತ್, ಹಿಂದೂ ಜಾಗರಣಾ ಸಮಿತಿಯಿಂದ ಸಾರ್ವನಿಕ ವಿಜಯದಶಮಿ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಯುವ ಬೈಕ್ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯ ಸೇರಿದಂತೆ 7 ರಾಜ್ಯಗಳಲ್ಲಿ ಅತೀವೃಷ್ಟಿ ಉಂಟಾಗಿದ್ದು ಜನರು ಮನೆ-ಮಠ ಆಸ್ತಿ ಕಳೆದುಕೊಂಡಿದ್ದಾರೆ. ಈಗಾಗಲೇ ರಾಜ್ಯದ ನೆರೆ ಪ್ರದೇಶಕ್ಕೆ ಕೇಂದ್ರ ಗೃಹ ಸಚಿವರಾದ ಅಮಿತ್ ಷಾ ಹಾಗೂ ನಿರ್ಮಲಾ ಸೀತಾರಾಮನ್ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ.ಇಲ್ಲಿನ ಹಾನಿಯ ಬಗ್ಗೆ ವರದಿ ತರಿಸಿಕೊಂಡಿದ್ದಾರೆ. ಮೊದಲ ಹಂತದಲ್ಲಿ 1,200 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು 3 ಸಾವಿರ ಕೋಟಿ ರೂ ಬಿಡುಗಡೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ಸಿಗುವ ನಿರೀಕ್ಷೆ ಇದೆ ಎಂದರು.
ಈಗಾಗಲೇ ಸಣ್ಣ ಪ್ರಮಾಣದಲ್ಲಿ ಹಾನಿಯಾದ ಮನೆಗೆ 10 ಸಾವಿರದಿಂದ 1 ಲಕ್ಷದ ವರೆಗೆ ಹಣ ನೀಡಲಾಗಿದೆ. ಇನ್ನು ಸಂಪೂರ್ಣ ಮನೆ ನಾಶ ಆದವರಿಗೆ 5 ಲಕ್ಷ ಪರಿಹಾರ ನೀಡಲು ಮುಖ್ಯಮಂತ್ರಿ ಅವರು ಸೂಚಿಸಿದ್ದಾರೆ.
ಅತಿವೃಷ್ಠಿಯಿಂದಾಗಿ 38 ಸಾವಿರ ಕೋಟಿ ನಷ್ಟವಾಗಿದೆ. ಶೇ 10 ರಷ್ಟು ಪರಿಹಾರ ನೀಡಬೇಕೆಂಬ ನಿಯಮವಿದೆ. ಆದ್ದರಿಂದ ಕೇಂದ್ರ ಸರ್ಕಾರ ಮೊದಲ ಹಂತವಾಗಿ 1,200 ಕೋಟಿ ಬಿಡುಗಡೆ ಮಾಡಿದೆ. ಎಲ್ಲಾ ಕೆಲಸವನ್ನು ಒಂದೇ ಸಲ ಮುಗಿಸಲು ಬ್ರಹ್ಮದಿಂದಲೂ ಸಾಧ್ಯವಿಲ್ಲ.ಹಂತ ಹಂತವಾಗಿ ಪರಿಹಾರ ಒದಗಿಸುವ ಕೆಲಸವನ್ನು ರಾಜ್ಯ ಸರ್ಕಾರ ಕೈಗೊಳ್ಳಲಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಒಳ್ಳೆಯ ಮಳೆ-ಬೆಳೆಯಾಗಿ ಎಲ್ಲರು ಸುಭಿಕ್ಷೆಯಿಂದ ಜೀವನ ನಡೆಸುವಂತಾಗಲಿ ಎನ್ನುವ ಉದ್ದೇಶದಿಂದ ಸಾರ್ವಜನಿಕ ದಸರಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಈ ವೇಳೆ ಶಾಸಕ ಎಸ್.ಎ ರವೀಂದ್ರನಾಥ್, ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತ್ ರಾವ್ ಜಾಧವ್,ಕೆ.ಬಿ ಶಂಕರನಾರಾಯಣ್, ದೇವರಮನೆ ಶಿವಕುಮಾರ್, ಶಿವಗಂಗಾ ಬಸವರಾಜ್, ಗುರು ಜೊಳ್ಳಿ, ಅಜೇಯ್ ಕುಮಾರ್, ರಾಜನಹಳ್ಳಿ ಶೀವಕುಮಾರ್, ಪಿಸಿ ಶ್ರೀನಿವಾಸ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಬೈಕ್ ರ‍್ಯಾಲಿ ಎವಿಕೆ ಕಾಲೇಜ್,ಹೈಸ್ಕೂಲ್ ಮೈದಾನ, ಪಿಬಿ ರಸ್ತೆ, ವಿನೋಬ ನಗರ, ಗುಂಡಿವೃತ್ತ, ಮಾಮಸ್ ಜಾಯಿಂಟ್ ರಸ್ತೆ, ಆಂಜನೇಯ ಬಡಾವಣೆ, ವಿದ್ಯಾನಗರ, ಆಂಜನೇಯ ಬಡಾವಣೆ, ಹದಡಿ ರಸ್ತೆ, ಹೆಚ್ ಕೆ ಆರ್ ವೃತ್ತ, ಶಿವಪ್ಪಯ್ಯ ವೃತ್ತ, ಹಳೇ ಬಸ್ ನಿಲ್ದಾಣ, ಈರುಳ್ಳಿ ಮಾರುಕಟ್ಟೆ, ಅರಳಿಮರ ವೃತ್ತ, ಆಜಾದ್ ನಗರ, ಗಾಂದಿನಗರ, ಹೊಂಡದ ವೃತ್ತ ಮಾರ್ಗದಲ್ಲಿ ಸಂಚರಿ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಮುಕ್ತಾಯಗೊಂಡಿತು.



