ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ವಿತರಣಾ ಕೇಂದ್ರದ ಮೌನೇಶ್ವರ, ಜಯನಗರ, ಇ.ಎಸ್.ಐ ಡಿ.ಸಿ.ಎಂ. ಫೀಡರ್‍ಗಳಲ್ಲಿ ಹಾಗೂ ಕೆ.ವಿ. ಸ್ವೀಕರಣಾ ಕೇಂದ್ರದ ಹೊರಡುವ ವಾಟರ್ ವರ್ಕ್ಸ್, ಇಂಡಸ್ಟ್ರಿಯಲ್, ತೋಳಹುಣಸೆ, ಅತ್ತಿಗೆರೆ ಹಾಗೂ ಯಲ್ಲಮ್ಮ ಫೀಡರ್‍ಗಳಲ್ಲಿ ತುರ್ತು ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಅ.20 ರಂದು ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವುಂಟಾಗಲಿದೆ.
ಮೌನೇಶ್ವರ ಫೀಡರ್ ವ್ಯಾಪ್ತಿಯ ಹೆಚ್.ಕೆ. ಆರ್. ಸರ್ಕಲ್, ಕೆ.ಇ.ಬಿ ಕಾಲೋನಿ, ನಿಟುವಳ್ಳಿ ಹಾಗು ನಿಟುವಳ್ಳಿ ಹೊಸ ಬಡಾವಣೆ, ಮೌನೇಶ್ವರ ಬಡಾವಣೆ, ಸೈಯದ್ ಪೀರ್ ಬಡಾವಣೆ, ಐ.ಟಿ.ಐ. ರಿಂಗ್ ರಸ್ತೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು. ಜಯನಗರ ಫೀಡರ್ ವ್ಯಾಪ್ತಿಯ ಜಯನಗರ, ದುರ್ಗಾಂಬಿಕ ದೇವಸ್ಥಾನ ಸುತ್ತಮುತ್ತ, ಎಸ್.ಎಸ್.ಹೈಟೆಕ್ ಆಸ್ಪತ್ರೆ ರಸ್ತೆ, ಭಗೀರಥ ಸರ್ಕಲ್, ಕಾಳಿಕಾಂಬ ದೇವಸ್ಥಾನ, ಶಕ್ತಿನಗರ, ಹಾಗು ಸುತ್ತ ಮುತ್ತಲಿನ ಪ್ರದೇಶ.
ಇ.ಎಸ್.ಐ ಫೀಡರ್ ವ್ಯಾಪ್ತಿಯ ಇ.ಎಸ್.ಐ ಆಸ್ಪತ್ರೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು. ಇಂಡಸ್ಟ್ರಿಯಲ್ ಫೀಡರ್ ವ್ಯಾಪ್ತಿಯ ಇಂಡಸ್ಟ್ರಿಯಲ್ ಏರಿಯ ಲೋಕಿಕೆರೆ ರಸ್ತೆ, ಸುಬ್ರಹ್ಮಣ್ಯನಗರ, ಎಸ್.ಎ .ರವೀಂದ್ರನಾಥ ಬಡಾವಣೆ ಮತ್ತು ಸುತ್ತಮುತ್ತ ಪ್ರದೇಶಗಳು. ತೋಳಹುಣಸೆ ಫೀಡರ್ ವ್ಯಾಪ್ತಿಯ ಗ್ರಾಮೀಣ ಪದೇಶಗಳಾದ ಪಾಮೇನಹಳ್ಳಿ ಹಾಗೂ ಸುತ್ತಮುತ್ತ ಪ್ರದೇಶಗಳು. ಅತ್ತಿಗೆರೆ ಫೀಡರ್ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಾದ ಪಾಮೇನಹಳ್ಳಿ, ಶಿರಮನಹಳ್ಳಿ, ನಾಗನೂರು, 6 & 7ನೇ ಮೈಲಿಕಲ್ಲು, ಬಿಸಲೇರಿ ಹಾಗೂ ಸುತ್ತಮುತ್ತ ಪ್ರದೇಶ.
ಯಲ್ಲಮ್ಮ ಫೀಡರ್ ವ್ಯಾಪ್ತಿಯ ಪಾಮೇನಹಳ್ಳಿ ನೀರಾವರಿ ವ್ಯಾಪ್ತಿಯ ಪ್ರದೇಶಗಳು ಸುತ್ತಮುತ್ತ ಪ್ರದೇಶಗಳು.. ವಾಟರ್ ವಕ್ರ್ಸ ಫೀಡರ್ ವ್ಯಾಪ್ತಿಯ ದೂರದರ್ಶನ ಕೇಂದ್ರ, ಮಹಾನಗರ ಪಾಲಿಕೆ ನೀರು ಸರಬರಾಜು ಘಟಕಗಳು, ಸಕ್ರ್ಯೂಟ್ ಹೌಸ್, ಭೂಸೇನಾ ನಿಗಮ, ಜಿಲ್ಲಾ ಪಂಚಾಯತ್ ಕಚೇರಿ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಹಾಗೂ ಡಿ.ಸಿ.ಎಂ. ಫೀಡರ್ ವ್ಯಾಪ್ತಿಯ ಜಯನಗರ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ (ಬೆಳಿಗ್ಗೆ 10 ರಿಂದ ಸಂಜೆ 4) ವಿದ್ಯುತ್ ವ್ಯತ್ಯಯವುಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.