ಡಿವಿಜಿ ಸುದ್ದಿ, ದಾವಣಗೆರೆ: ಮಹಾನಗರ ಪಾಲಿಕೆ ಆರೋಗ್ಯ ಶಾಖೆ ವತಿಯಿಂದ ಇಂದು ನಗರದ ವಿವಿಧ ಭಾಗದಲ್ಲಿ ದಾಳಿ ಮಾಡಿದ್ದು, ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ 600 ಕೆಜಿ ಪ್ಲಾಸ್ಟಿಕ್ ಕವರ್ ಗಳನ್ನು ವಶ ಪಡಿಸಿಕೊಳ್ಳಲಾಯಿತು.
ಆಯುಕ್ತರ ಮಾರ್ಗದರ್ಶನದಲ್ಲಿ ನಗರದ ಚಾಮರಾಜಪೇಟೆ ಹಾಗೂ ಎಂ ಜಿ ರಸ್ತೆ ಪ್ರದೇಶದಲ್ಲಿ ದಾಳಿ ನಡೆಸಿದ್ದು, ಅನಧಿಕೃತವಾಗಿ ಪ್ಲಾಸ್ಟಿಕ್ ಮಾರುತ್ತಿದ್ದ ಅಂಗಡಿ ಮಾಲೀಕರಿಂದ 600 ಕೆಜಿ ಪ್ಲಾಸ್ಟಿಕ್ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಯಿತು.
ಪಾಸ್ಟಿಕ್ ಕವರ್ ಮಾರಾಟ ನಿಷೇಧಿಸಿದ್ದರೂ, ಅಕ್ರಮವಾಗಿ ಮಾರಾಟ ಮಾಡಲಾಗುತ್ತಿತ್ತು. ಸರ‍್ವಜನಿಕರ ದೂರಿನ ಅನ್ವಯ ದಾಳಿ ನಡೆದಿದ್ದು, ಅಂಗಡಿ ಮಾಲೀಕರಿಗೆ 12000 ದಂಡ ವಿಧಿಸಲಾಗಿದೆ. ಈ ಸಂರ‍್ಭದಲ್ಲಿ ಆರೋಗ್ಯ ನಿರೀಕ್ಷಕರಾದ ಪ್ರಕಾಶ್, ನೀಲಪ್ಪ , ಶಶಿಧರ್ , ಮಲ್ಲಿಕಾ, ಉಷಾ , ರಾಘವೇಂದ್ರ ಹಾಗೂ ಸಿಬ್ಬಂದಿ ರ‍್ಗದವರು ಉಪಸ್ಥಿತರಿದ್ದರು.



