ಡಿವಿಜಿ ಸುದ್ದಿ, ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾದಲ್ಲಿ ಇದುವರೆಗೆ ನಟಿಯರು, ನಿರೂಪಕರಿಗೆ ಮಾತ್ರ ವಿಚಾರಣೆ ಎದುರಿಸಿದ್ದರು. ಆದರೆ, ಈಗ ಸ್ಯಾಂಡಲ್‍ವುಡ್‍ಗೆ ಅತಿ ದೊಡ್ಡ ಶಾಕ್ ಕಾದಿದೆ.
ಈ ಬಾರಿ ಸಿಸಿಬಿಯಿಂದ ಕಾರ್ಯಾಚರಣೆಗಿಳಿದಿಲ್ಲ. ಮಾದಕ ವಸ್ತು ನಿಯಂತ್ರಣ ಸಂಸ್ಥೆ(ಎನ್‍ಸಿಬಿ) ವಿಚಾರಣೆ ಕೈಗೆತ್ತಿಕೊಂಡಿದೆ. ಈ ಮೂಲಕ ಡ್ರಗ್ ಕೇಸಿನಲ್ಲಿ ಎನ್‍ಸಿಬಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದು, ಶೀಘ್ರವೇ ಸ್ಯಾಂಡ್‍ಲವುಡ್ ಗೆ ಮತ್ತೊಂದು ಶಾಕ್ ನೀಡಲಿದೆ.
ಕಾರ್ಪೊರೇಟರ್ ಮಗ ಯಶಸ್ ಆ ಸ್ಟಾರ್ ನಟ ಹೆಸರು ಹೇಳಿದ್ದಾನೆ. ಇದರಿಂದ ಸದ್ಯದಲ್ಲೇ ಕನ್ನಡದ ದೊಡ್ಡ ನಟನಿಗೆ ಶಾಕ್ ಸಿಗಲಿದೆ. ಯಶಸ್ ಹೇಳಿಕೆ ಆಧರಿಸಿ ಎನ್‍ಸಿಬಿ ದೊಡ್ಡ ನಟನ ಬೆನ್ನುಬಿದ್ದಿದೆ. ಸ್ಟಾರ್ ನಟ ಆಗಿರೋದ್ರಿಂದ ಪ್ರಬಲ ಸಾಕ್ಷ್ಯಕ್ಕೆ ಎನ್‍ಸಿಬಿ ಶೋಧಕ್ಕೆ ಇಳಿದಿದೆ.
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸ್ಯಾಂಡಲ್‍ವುಡ್ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾಣಿ ಹಾಗೂ ಇತರರು ಪರಪ್ಪನ ಅಗ್ರಹಾರ ಸೇರಿದ್ದಾರೆ. ಇಬ್ಬರೂ ನಟಿಯರ ನ್ಯಾಯಾಂಗ ಬಂಧನ ಅವಧಿಯನ್ನು ಅಕ್ಟೋಬರ್ 23ರವರೆಗೆ ವಿಸ್ತರಿಸಿ ಡಿಪಿಎಸ್ ವಿಶೇಷ ನ್ಯಾಯಾಲಯ ಆದೇಶಿಸಿದೆ.



