ಕುರುಕ್ಷೇತ್ರ : ಕೇಂದ್ರದಲ್ಲಿ ನಾವು ಅಧಿಕಾರದಲ್ಲಿ ಇದ್ದಿದ್ದರೆ ಚೀನಾ ಸೈನ್ಯಯನ್ನು 15 ನಿಮಿಷದಲ್ಲಿ ಲಾಡಕ್ ನಿಂದ ಉಡೀಸ್ ಮಾಡ್ತಿದ್ವಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಹರಿಯಾಣದ ಕುರುಕ್ಷೇತ್ರದಲ್ಲಿ ಮಾತನಾಡಿದ ಅವರು, ಚೀನಾ ಸೈನ್ಯವು ಈ ಹಿಂದೆ ಭಾರತದ ಭೂ ಪ್ರದೇಶದಲ್ಲಿ ಕಾಲಿಡುವ ಧೈರ್ಯ ಇರಲಿಲ್ಲ. ಈಗ ಭಾರತದ 1200 ಚದರ ಕಿ.ಮೀ ಭೂಮಿ ಆಕ್ರಮಿಸಿಕೊಂಡಿದೆ.ಆದರೆ, ಪರ್ಯಾಸವೆಂದರೆ ಪ್ರಧಾನಿ ಮೋದಿ ಇದನ್ನು ನಿರಾಕರಿಸಿದ್ದಾರೆ ಎಂದರು.
ತನ್ನ ಭೂಪ್ರದೇಶವನ್ನು ಆಕ್ರಮಿಸಿಕೊಳ್ಳಲು ಬೇರೆ ದೇಶವೊಂದಕ್ಕೆ ಅನುವು ಮಾಡಿಕೊಟ್ಟಿರುವ ಏಕೈಕ ದೇಶ ಭಾರತ. ಚೀನಾ ಪಡೆಗಳು ನಮ್ಮ ಭೂಪ್ರದೇಶದಲ್ಲಿದ್ದಾರೆ. ಮೋದಿ ತಮ್ಮನ್ನು ತಾವು ದೇಶಭಕ್ತ ಎಂದು ಕರೆದುಕೊಳ್ಳುತ್ತಾರೆ. ಯಾವ ರೀತಿಯ ದೇಶಭಕ್ತರು ಎಂದು ಪ್ರಶ್ನಿಸಿದರು.



