ಡಿವಿಜಿ ಸುದ್ದಿ, ದಾವಣಗೆರೆ: ಹಿಂದೂಪರ ಸಂಘಟನೆ ವತಿಯಿಂದ ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ಸಮರ್ಪಿಸಲಿರುವ ಬೆಳ್ಳಿ ಇಟ್ಟಿಗೆ ಅ.6 ರಂದು ದಾವಣಗೆರೆ ನಗರಕ್ಕೆ ಬರಲಿದ್ದು, ಕೊರೊನಾ ವೈರಸ್ ಹಿನ್ನೆಲೆ ಸಾಂಕೇತಿಕವಾಗಿ ಸ್ವಾಗತ ಸಮಾರಂಭ ಆಯೋಜಿಸಲಾಗಿದೆ ಎಂದು ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅ.6 1990 ರಂದು ಎಲ್.ಕೆ ಅಡ್ವಾಣಿ ನೇತೃತ್ವದಲ್ಲಿ ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಆಗಬೇಕೆಂಬ ವಿಚಾರವಾಗಿ ನಡೆದಂತಹ ರಥಯಾತ್ರೆಯು ದಾವಣಗೆರೆಗೆ ಆಗಮಿಸಿದ ವೇಳೆ ನಡೆದ ಘರ್ಷಣೆ ನಡೆದಿತ್ತು. ಈ ವೇಳೆ ಸುಮಾರು 8 ಜನ ಹುತಾತ್ಮರಾಗಿದ್ದರು.ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಅವರ ನೆನಪಿಗಾಗಿ 15 ಕೆ.ಜಿ ಬೆಳ್ಳಿ ಇಟ್ಟಿಗೆ ನಿರ್ಮಾಣಗೊಂಡಿದ್ದು ಅಂದು ಈ ಇಟ್ಟಿಗೆಗಳನ್ನು ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ರಾಮ ರಥದಲ್ಲಿರಿಸಿ ಪುಷ್ಪಾರ್ಚನೆ ಮಾಡಿ ವೆಂಕಟೇಶ್ವರ ವೃತ್ತದಿಂದ ಪ್ರಮುಖ ರಸ್ತೆಗಳಲ್ಲಿ ಬೈಕ್ ಜಾಥಾ ಮುಖಾಂತರ ಶ್ರೀರಾಮಮಂದಿರಕ್ಕೆ ತೆರಳಲಾಗುವುದು. ನಂತರ ಪೂಜೆ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ರಾಜನಹಳ್ಳಿ ಶಿವಕುಮಾರ್,ಎಲ್. ಗೋಣೆಪ್ಪ, ಪಾಲಿಕೆ ಸದಸ್ಯ ಟಿ. ಶಿವನಗೌಡ ಪಾಟೀಲ್ ಇದ್ದರು.



