ಡಿವಿಜಿ ಸುದ್ದಿ, ತುಮಕೂರು: ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಸಚಿವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.ಇತ್ತೀಚೆಗೆ ಸಚಿವರ ಕಾರು ಚಾಲಕ ಮತ್ತು ಅವರ ಮನೆಯ ಅಡುಗೆ ಕೆಲಸದ ಒಬ್ಬರಿಗೆ ಸೋಂಕು ದೃಢವಾಗಿತ್ತು. ಈ ಕಾರಣದಿಂದ ಸಚಿವರು ಪರೀಕ್ಷೆ ಮಾಡಿಸಿಕೊಂಡಿದ್ದರು. ಸೋಂಕು ತಗುಲಿರುವುದು ದೃಢಪಟ್ಟಿದೆ.



