ಡಿವಿಜಿ ಸುದ್ದಿ, ದಾವಣಗೆರೆ: ಕೃಷಿ ಯಾಂತ್ರೀಕರಣ ಯೋಜನೆಯಡಿ ಕೃಷಿ ಯಂತ್ರೋಪಕರಣಗಳಿಗೆ ಸಹಾಯಧನ ನೀಡಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಸಾಮಾನ್ಯ ವರ್ಗದ ರೈತರಿಗೆ ಮಾತ್ರ ಸಹಾಯಧನ ಲಭ್ಯವಿದ್ದು, ಉಳುಮೆಯಿಂದ ಕೊಯ್ಲುವರೆಗೆ ಉಪಯುಕ್ತವಿರುವ ವಿವಿಧ ಮಾದರಿ ಭೂಮಿ ಸಿದ್ದತೆ, ಬಿತ್ತನೆ ಉಪಕರಣಗಳು, ಅಂತರ ಬೇಸಾಯ ಉಪಕರಣಗಳು, ರೋಟೋವೇಟರ್‍ಗಳು ಎಂಜಿನ್ ಚಾಲಿತ ಸಸ್ಯ ಸಂರಕ್ಷಣಾ ಬೆಳೆ ಕಟಾವು, ಒಕ್ಕರಣೆ ಯಂತ್ರಗಳು, ತ್ಯಾಜ್ಯ ವಸ್ತುಗಳ ನಿರ್ವಹಣಾ ಉಪಕರಣಗಳು ಲಭ್ಯವಿದೆ.
ರೈತರು ಪಹಣಿ, ಆಧಾರ್‍ಕಾರ್ಡ್, ಫೋಟೋ, ಟ್ರಾಕ್ಟರ್ ಆರ್.ಸಿ. ಬುಕ್, ಬ್ಯಾಂಕ್‍ಪಾಸ್ ಬುಕ್‍ಗಳ ಪ್ರತಿಗಳನ್ನು ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ನೀಡಿ ಸೌಲಭ್ಯ ಪಡೆಯಬಹುದೆಂದು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



