ಡಿವಿಜಿ ಸುದ್ದಿ, ದಾವಣಗೆರೆ : ಕೊರೊನಾ ಸಂಕಷ್ಟ ದಿನದಲ್ಲಿ ಪಾಲಿಕೆಗೆ ಸಂಬಂಧಿಸಿದ ಶುಲ್ಕ ಪಾವತಿಸಲು ವಲಯ ಕಚೇರಿಗಳಿಗೂ ವಿಸ್ತರಿಸುವಂತೆ ಗೋ-ಗ್ರೀನ್ ಸಂಸ್ಥೆ ಮತ್ತು ರೋರ‍್ಯಾಕ್ಟ್ ಸಂಸ್ಥೆ ವತಿಯಿಂದ ಮಹಾನಗರ ಪಾಲಿಕೆಯ ಆಯುಕ್ತ ವಿಶ್ವನಾಥ್ ಮುದ್ದಜ್ಜಿ ಅವರಿಗೆ ಮನವಿ ಸಲ್ಲಿಸಲಾಯಿತು.
ಮಹಾನಗರ ಪಾಲಿಕೆ ಕಚೇರಿಯಲ್ಲಿ ಕಂದಾಯ ಪಾವತಿ, ಖಾತೆ ಬದಲಾವಣೆ ಸೇರಿದಂತೆ ಇತರೆ ಶುಲ್ಕ ಪಾವತಿಗೆ ಒಂದೆಡೆಯೇ ಗುಂಪು-ಗುಂಪಾಗಿ ಜನರು ಸೇರುತ್ತಿದ್ದಾರೆ. ಇದು ಅಪಾಯಕಾರಿಯಾದ ಸಂಗತಿಯಾಗಿದ್ದು ಪಾಲಿಕೆ ಆಯಾ ವಲಯ ಕಚೇರಿಗಳಿಗೆ ಶುಲ್ಕ ಪಾವತಿಸಲು ಅವಕಾಶ ನೀಡಬೇಕು ಎಂದು ಮನವಿ ನೀಡಲಾಯಿತು.
ಶುಲ್ಕ ಪಾವತಿಯನ್ನು ವಲಯ ಕಚೇರಿಗಳಿಗೆ ವಿಸ್ತರಿಸಿದಲ್ಲಿ ಕೆಲಸದ ವೇಗ ಹೆಚ್ಚುತ್ತದೆ ಜೊತೆಗೆ ಸಾರ್ವಜನಿಕರಿಗೂ ಅಮುಕೂಲವಾಗಲಿದೆ. ಇದು ಕೊರೊನಾ ಹರಡುವಿಕೆಯನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ಆದಷ್ಟು ಬೇಗನೆ ಈ ಮನವಿಯನ್ನು ಕಾರ್ಯರೂಪಕ್ಕೆ ತರಬೇಕೆಂದು ಗೋ-ಗ್ರೀನ್ ಮತ್ತು ರೋರ‍್ಯಾಕ್ಟ್ ಸಂಸ್ಥೆ ಸದಸ್ಯರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಗೋ-ಗ್ರೀನ್ ಸಂಸ್ಥೆಯ ಸಂಚಾಲಕ ಶ್ರೀಕಾಂತ ಬಗರೆ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಕೆ.ಜಿ. ಶಿವಕುಮಾರ್, ಮಹಮ್ಮದ್ ಗೌಸ್, ಸುರೇಶ್ ಕೆ.ಎನ್, ಪ್ರವೀಣ್ ಫಾರ್ಮಾ, ರೋರ‍್ಯಾಕ್ಟ್ ಸಂಸ್ಥೆ ಅಧ್ಯಕ್ಷ ಸದಾನಂದ ಜಿ., ಕಾರ್ಯದರ್ಶಿ ಚೇತನ್‌ಕುಮಾರ್ ಎ.ಎ., ಪ್ರವೀಣ್ ಮತ್ತಿತರರು ಉಪಸ್ಥಿತರಿದ್ದರು.



