Connect with us

Dvgsuddi Kannada | online news portal | Kannada news online

ಮನೆಯಲ್ಲಿಯೇ ಗಂಟಲು ತುರಿಕೆ ನಿವಾರಿಸಿಕೊಳ್ಳುವುದು ಹೇಗೆ..?  

ಆರೋಗ್ಯ

ಮನೆಯಲ್ಲಿಯೇ ಗಂಟಲು ತುರಿಕೆ ನಿವಾರಿಸಿಕೊಳ್ಳುವುದು ಹೇಗೆ..?  

ಗಂಟಲಿನ ತುರಿಕೆ ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಇದನ್ನು ಕೇವಲ ನಾಲ್ಕೈದುದಿನಗಳಲ್ಲೂ ಸರಿಪದಿಸಬಹುದು. ಒಂದು ವೇಳೆ ಈ ತುರಿಕೆಯ ನೋವು ಗುಣಮುಖವಾಗದಿದ್ದರೆ ನೀವು ವೈದ್ಯರನ್ನು ಸಂಪರ್ಕಿಸಬಹುದು. ಹೆಚ್ಚಿನ ಸಂದರ್ಭಗಳಲ್ಲಿ ನೋಯುತ್ತಿರುವ ಗಂಟಲು ಒಂದು ವೈರಲ್ ಸಮಸ್ಯಾಗಿರುತ್ತದೆ. ಆದರೆ, ಕೆಲವೊಮ್ಮೆ ಇದು ಬ್ಯಾಕ್ಟೀರಿಯಾ ಇನ್ಫೆಕ್ಷನ್ ಕೂಡ ಆಗಿರಬಹುದು.

ಸ್ಟ್ರೆಪ್ಟೋಕೊಕಸ್ ಬ್ಯಾಕ್ಟೀರಿಯಾದಿಂದ ಉಂಟಾಗುವ ಸ್ಟ್ರೆಪ್ ಥ್ರೋಟ್  ಹೆಚ್ಚು ಅಪಾಯಕಾರಿ. ಸ್ಟ್ರೆಪ್ಟೋಕೊಕಸ್ ಬ್ಯಾಕ್ಟೀರಿಯಾದ ಸೋಂಕು ಕೂಡ ಹೆಚ್ಚಿನ ಜ್ವರಕ್ಕೆ ಕಾರಣವಾಗಬಹುದು. ಗಂಟಲಿನ ಸೋಂಕು ವೈರಲ್ ಗಂಟಲಿನ ಸೋಂಕುಗಿಂತ ಹೆಚ್ಚು ತೊಂದರೆ ಉಂಟುಮಾಡುತ್ತದೆ. ಸ್ಟ್ರೆಪ್ ಥ್ರೋಟ್ ಗೆ ಚಿಕಿತ್ಸೆ ನೀಡದಿದ್ದರೆ ರುಮಾಟಿಕ್ ಜ್ವರದ ಅಪಾಯವೂ ಇದೆ. ಗಂಟಲು ಕಿರಿಕಿರಿ  ಯಾವುದೇ ಸಮಯದಲ್ಲಿ ಸಂಭವಿಸಬಹುದು. ಇದನ್ನು ಮನೆಮದ್ದುಗಳಿಂದಲೂ ಕೂಡ ಪರಿಹರಿಸಬಹುದು.

throat 2

1. ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿ
ಉಪ್ಪನ್ನು ನೀರಿಗೆ ಬೆರೆಸಿ ಅದನ್ನು ಬಿಸಿ ಮಾಡಬೇಕು. ಬಳಿಕ ಆ ನೀರಿನಿಂದ ಬಾಯಿ ಮುಕ್ಕಳಿಸಿದರೆ ಗಂಟಲು ನೋವಿನಿಂದ ಆರಾಮ ಸಿಗುತ್ತದೆ.  ಇದಕ್ಕಾಗಿ ಅರ್ಧ ಚಮಚೆ ಉಪ್ಪನ್ನು 4-8 ಔನ್ಸ್ ನೀರಿಗೆ ಬೆರೆಸಿ ಅದನ್ನು ಉಪ್ಪು ಕರಗುವವರೆಗೆ ಬಿಸಿ ಮಾಡಬೇಕು. ಬಳಿಕ ಕೆಲ ನಿಮಿಷಗಳ ಕಾಲ ಬಾಯಿ ಮುಕ್ಕಳಿಸಬೇಕು. ದಿನದಲ್ಲಿ ಹಲವು ಬಾರಿ ನೀವು ಈ ಕೆಲಸ ಮಾಡಬಹುದಾಗಿದೆ.

2. ಹೈಡ್ರೇಟೆಡ್ ಆಗಿರಿ
ಗಂಟಲಿನಲ್ಲಿ ಕಿರಿಕಿರಿಯದ ವೇಳೆ ಹೈಡ್ರೇಟೆಡ್ ಆಗಿರುವುದು ತುಂಬಾ ಮುಖ್ಯ. ಇದರಿಂದ ನಮ್ಮ ಶರೀರಿರ ಹೆಚ್ಚಿನ ಪ್ರಮಾಣದಲ್ಲಿ ಲಾಲಾ ರಸ ಸೃವಿಸುತ್ತದೆ. ಸಮಸ್ಯೆ ದೂರಗೊಳಿಸಲು ಬಿಸಿಯಾದ ಚಹಾ ಹಾಗೂ ಬಿಸಿ ಸೂಪ್ ಜಗದಲ್ಲಿ ಬಿಸಿ ನೀರು ಒಂದು ಉತ್ತಮ ಆಯ್ಕೆಯಾಗಿದೆ.

3.ಚಹಾ ಜೊತೆಗೆ ಜೇನುತುಪ್ಪ 
ಒಂದು ವೇಳೆ ನೀವು ಚಹಾ ಸೇವಿಸುತ್ತಿದ್ದರೆ, ಚಹಾದಲ್ಲಿ ಜೇನುತುಪ್ಪ ಬೆರೆಸಲು ಮರೆಯದಿರಿ. ಕೆಮ್ಮು ನಿವಾರಣೆಗೆ ಜೇನುತುಪ್ಪ ಒಂದು ಉತ್ತಮ ಮದ್ದು. ಚಹಾ ನಿಮ್ಮ ಶರೀರ ಹಾಗೂ ಗಂಟಲನ್ನು ತೇವವಾಗಿಡುತ್ತದೆ.

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಆರೋಗ್ಯ

ದಾವಣಗೆರೆ

Advertisement
Advertisement Enter ad code here

Title

To Top