ಕೊರೊನಾ ವೈರಸ್ ಬಂದ ನಂತೆ ಮನೆ, ಅಫೀಸ್ ಸೇರಿದಂತೆ ಎಲ್ಲ ಕಡೆ ವಾತಾವರಣ ಬದಲಾಗಿದೆ. ಮನೆಯಲ್ಲೇ ಇದ್ದರೂ ತಿಂಡಿ, ಊಟಕ್ಕೆ ಮೊದಲು ಹ್ಯಾಂಡ್ ವಾಶ್ ಬಳಸುತ್ತೇವೆ. ಮನೆಯಿಂದ ಹೊರಗೆ ಹೋಗಬೇಕಾದರೆ ಸ್ಯಾನಿಟೈಸರ್ ಬಳಕೆ ಮಾಡುತ್ತೇವೆ. ಪ್ರತಿಯೊಂದು ಕಡೆಯಲ್ಲೂ ನಮಗೆ ಕೈ ತೊಳೆಯಲು ವ್ಯವಸ್ಥೆ ಇಲ್ಲದೆ ಇರುವ ಕಾರಣಕ್ಕಾಗಿ ಸ್ಯಾನಿಟೈಸರ್ ಬಳಕೆ ಮಾಡುತ್ತೇವೆ.
ಸ್ಯಾನಿಟೈಸರ್ ನ್ನು ನಾವು ಈಗ ದಿನನಿತ್ಯದ ಅಗತ್ಯವಾಗಿ ಪರಿಗಣಿಸಿಬಿಟ್ಟಿದ್ದೇವೆ. ಆದರೆ ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ಸ್ಯಾನಿಟೈಸರ್ ನ್ನು ಅತಿಯಾಗಿ ಬಳಕೆ ಮಾಡಿದರೆ ಅದು ಶರೀರದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುವುದು ಎಂದು ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಹೇಳಿದೆ.

ಈ ಸ್ಯಾನಿಟೈಸರ್ ದೇಹವನ್ನು ಸೇರಿದರೆ ದೇಹದ ಅಂಗಾಂಗಳಿಗೆ ಹಾನಿಯುಂಟು ಮಾಡುವುದು, ಇದರಿಂದ ಕುರುಡುತನ ಕೂಡ ಉಂಟಾಗುವುದು. ಸೇಫ್ಟಿ ಡಾಕ್ಯೂಮೆಂಟ್ ಪ್ರಕಾರ ಈ ಸ್ಯಾನಿಟೈಸರ್‌ನಿಂದ ತಲೆಸುತ್ತು, ವಾಂತಿ, ಬೇಧಿ ಮುಂತಾದ ಸಮಸ್ಯೆ ಉಂಟಾಗುವುದು. ಅಲ್ಲದೆ ಖಿನ್ನತೆ, ತಲೆನೋವು, ಸುಸ್ತು ಮುಂತಾದ ಅನುಭವ ಉಂಟಾಗುವುದು.
ಇದು ಸ್ವಲಪ್ ಹೊಟ್ಟೆಗೆ ಹೋದರೂ ಉಸಿರಾಟ ತೀ ವ್ರವಾಗುವುದು, ಹೃದಯ ಬಡಿತ ನಿಧಾನವಾಗುವುದು, ಕಿಡ್ನಿ ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಾಗುವುದಿಲ್ಲ, ಕೆಲವರು ಕೋಮಾಕ್ಕೆ ಹೋಗಿ, ಇದರಿಂದ ಸಾವು ಕೂಡ ಸಂಭವಿಸಬಹುದು.
ನಮ್ಮ ದೇಹದಲ್ಲಿ ಕೂಡ ಕೆಲವು ಸೂಕ್ಷ್ಮ ಜೀವಿಗಳು ಇರುತ್ತವೆ. ಇದು ನಮ್ಮ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಬೀರುವಂತದ್ದಾಗಿದೆ. ಆದರೆ ಸ್ಯಾನಿಟೈಸರ್ ಇದೆಲ್ಲವನ್ನು ನಾಶ ಮಾಡುವ ಪರಿಣಾಮವಾಗಿ ಅದರಿಂದ ನಮಗೆ ತೊಂದರೆ ಆಗಬಹುದು. ಹೀಗಾಗಿ ಸ್ಯಾನಿಟೈಸರ್ ನ್ನು ಅತಿಯಾಗಿ ಬಳಕೆ ಮಾಡಬಾರದು.
ಜನರು ಇದರ ಬಗ್ಗೆ ಗಂಭೀರವಾಗಿ ಚಿಂತಿಸಬೇಕು ಮತ್ತು ತಮಗೆ ಸೋಪ್ ಅಥವಾ ನೀರು ಸಿಗದೆ ಇರುವ ಸಂದರ್ಭದಲ್ಲಿ ಸ್ಯಾನಿಟೈಸರ್ ಬಳಕೆ ಮಾಡಬೇಕು. ಅತಿಯಾದರೆ ಅಮೃತವೂ ವಿಷ! ನಮ್ಮಲ್ಲಿ ಒಂದು ಗಾದೆಯೇ ಇದೆ. ಅತಿಯಾದರೆ ಅಮೃತ ಕೂಡ ವಿಷವಾಗುವುದು ಎಂದು. ಅದೇ ಸ್ಯಾನಿಟೈಸರ್ ಗೆ ಕೂಡ ಅನ್ವಯವಾಗುವುದು. ಸ್ಯಾನಿಟೈಸರ್ ಅತಿಯಾಗಿ ಬಳಸಿದರೆ ಬ್ಯಾಕ್ಟೀರಿಯಾಗಳು ಪ್ರತಿಜೀವಕ ನಿರೋಧಕ ಶಕ್ತಿಯನ್ನು ಬೆಳೆಸಿಕೊಂಡು ಬಲಿಷ್ಠವಾಗಬಹುದು. ಅತಿಯಾಗಿ ಸ್ಯಾನಿಟೈಸರ್ ಬಳಕೆ ಮಾಡುವ ಬದಲು ನೀರು ಹಾಗೂ ಸೋಪಿನಿಂದ ಕೈಗಳನ್ನು ತೊಳೆಯಿರಿ.



