ಡಿವಿಜಿ ಸುದ್ದಿ, ದಾವಣಗೆರೆ: ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ನಮಗೆ ಯಾಕೆ ಬೇಕು ಡ್ರಗ್ಸ್ ಮಾಫಿಯಾ ಸುದ್ದಿ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕ್ಯಾಸಿನೋಗೆ ಹೋದವರೆಲ್ಲಾ ಡ್ರಗ್ಸ್ ಸೇವಿಸೋಲ್ಲ. ಕ್ಯಾಸಿನೋದಲ್ಲಿ ಜೂಜಾಟ ನಡೆಯುತ್ತದೆ. ಕ್ಯಾಸಿನೋಕ್ಕೆ ಹೋದವರು ಹಣ ಕಳೆದುಕೊಂಡು ಬರಬೇಕಷ್ಟೇ , ಕ್ಯಾಸಿನೋದಲ್ಲಿ ಆಡಿಸಿದವನಿಗೆ ಲಾಭ ಎಂದರು.
ಡ್ರಗ್ಸ್ ಮಾಫಿಯಾದಲ್ಲಿ ಶಾಸಕ ಜಮೀರ್ ಅಹ್ಮದ್ ಖಾನ್ ಹೆಸರು ಕೇಳಿ ಬರುತ್ತಿದೆಯಲ್ಲ ಎಂದ ಪ್ರಶ್ನಿಸಿದ್ದಕ್ಕೆ ಪ್ರತಿಕ್ರಿಯಿಸಿ, ಅವರ ಮೇಲೆ ಇವರು, ಇವರ ಮೇಲೆ ಅವರು ಹೇಳಿಕೊಂಡು ಹೋಗುತ್ತಿದ್ದಾರೆ. ನಟಿಯರ ಜೊತೆ ಪೋಟೋ ತೆಗೆಸಿಕೊಂಡವರು , ಕುಣಿದವರೆಲ್ಲಾ ಡ್ರಗ್ಸ್ ಅಡಿಟ್ ಗಳಲ್ಲ ಎಂದರು.



