ಡಿವಿಜಿ ಸುದ್ದಿ, ಚನ್ನಗಿರಿ: ತಾಲೂಕಿನ ಗೆದ್ದಲಹಳ್ಳಿಯಲ್ಲಿ ಅಕ್ರಮವಾಗಿ ಬೆಳೆದಿದ್ದ 80 ಸಾವಿರ ಮೌಲ್ಯದ 10 ಕೆಜಿ ಗಾಂಜಾ ಗಿಡಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗೆದ್ದಲಹಳ್ಳಿ ಗ್ರಾಮದ ಶ್ರೀಚೌಡೇಶ್ವರಿ ದೇವಸ್ಥಾನದ ಪಕ್ಕದ ಬದುವಿನಲ್ಲಿ ಮಹೇಶ್ ಎಂಬ ವ್ಯಕ್ತಿ ಅಕ್ರಮವಾಗಿ ಗಂಜಾವನ್ನು ಬೆಳೆದಿದ್ದನು. ಚನ್ನಗಿರಿ ಉಪಾಧಿಕ್ಷಕ ಪ್ರಶಾಂತ್ ಜಿ ಮುನ್ನೋಳಿ ನೇತೃತ್ವದಲ್ಲಿ ದಾಳಿ ನಡೆಸಿ ಒಟ್ಟು 80 ಸಾವಿರ ಬೆಲೆಯ 10 ಕೆಜಿ ಗಾಂಜಾ ಹಾಗೂ ಆರೋಪಿ ಮಹೇಶ್ ಅನ್ನು ವಶಕ್ಕೆ ಪಡೆಯಲಾಗಿದೆ.
ಪೊಲೀಸ್ ವೃತ್ತ ನಿರೀಕ್ಷಕ ಆರ್. ಆರ್. ಪಾಟೀಲ್, ಸಂತೇಬೆನ್ನೂರು ಪಿಎಸ್ ಐ ಶಿವರುದ್ರಪ್ಪ ಎಸ್ ಮೇಟಿ, ಸಿಬ್ಬಂದಿಗಳಾದ ಚಿದಾನಂದಪ್ಪ, ಹಮೀದ್, ನಿಂಗಣ್ಣ, ನಾಗರಾಜನಾಯ್ಕ್, ಆಂಜನೇಯ, ರಂಗಸ್ವಾಮಿ, ಕೋಟ್ರೇಶ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.



