ಡಿವಿಜಿ ಸುದ್ದಿ, ದಾವಣಗೆರೆ: ಮಲೇಬೆನ್ನೂರು ಸಮುದಾಯ ಅರೋಗ್ಯ ಕೇಂದ್ರ, ಹೊನ್ನಾಳಿಯ ತಾಲ್ಲೂಕು ಅರೋಗ್ಯ ಕೇಂದ್ರ, ಮಾದನಬಾವಿಯ ಕೋವಿಡ್ ಕೇರ್ ಸೆಂಟರ್ ಮತ್ತು ಚನ್ನಗಿರಿಯ ತಾಲ್ಲೂಕು ಅರೋಗ್ಯ ಕೇಂದ್ರ ಹಾಗೂ ಕಾಕನೂರು ಕೋವಿಡ್ ಕೇರ್ ಸೆಂಟರ್‍ಗಳಿಗೆ ಸೋಮವಾರ ಡಿಎಚ್‍ಓ ಅವರೊಂದಿಗೆ ಸಿಇಓ ಪದ್ಮಾ ಬಸವಂತಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೇಂದ್ರಗಳಲ್ಲಿನ ವ್ಯವಸ್ಥೆ ಬಗ್ಗೆ ಪರಿಶೀಲಿಸಿ ಕೋವಿಡ್ ರೋಗಿಗಳಿಗೆ ನಿಗದಿತ ಚಿಕಿತ್ಸೆ ಹಾಗೂ ಶುಚಿ ಮತ್ತು ರುಚಿಯಾದ ಬಿಸಿ ಬಿಸಿ ಆಹಾರವನ್ನು ವಿತರಿಸಲು ಕೋವಿಡ್ ಕೇರ್ ಸೆಂಟರ್ ಕೇಂದ್ರದ ಸಿಬ್ಬಂದಿಗಳಿಗೆ ತಿಳಿಸಿದರು. ಪ್ರತಿದಿನ ನಿಗದಿಪಡಿಸಲಾದ ಗಂಟಲು ದ್ರವ ಪರೀಕ್ಷೆಗಳನ್ನು ಮಾಡಲು ಸೂಕ್ತ ಕ್ರಮ ವಹಿಸುವಂತೆ ಟಿಎಚ್‍ಓಗಳಿಗೆ ಹಾಗೂ ಸ್ವ್ಯಾಬ್ ಕಲೆಕ್ಷನ್ ಟೀಮ್‍ಗಳಿಗೆ ಸಹಕಾರ ನೀಡಲು ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಲಾಯಿತು.



