ಡಿವಿಜಿ ಸುದ್ದಿ, ಬೆಂಗಳೂರು: ಡ್ರಗ್ಸ್ ಮತ್ತು ಅಕ್ರಮ ಹಣಕಾಸಿನ ಅವ್ಯವಹಾರಕ್ಕೆ ಸಬಂಧಿಸಿದಂತೆ ನಟಿ ಸಂಜನಾ ಗಲ್ರಾನಿ ಮತ್ತೆ ಮೂರು ದಿನ ಸಿಸಿಬಿ ಪೊಲೀಸ್ ಕಸ್ಟಡಿಗೆ ನ್ಯಾಯಾಲಯ ಒಪ್ಪಿಸಿದೆ.
ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್ ಮುಂದೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರುಪಡಿಸಲಾಗಿತ್ತು. ಈ ಪ್ರಕರಣದಲ್ಲಿ ಸಂಜನಾ ಅವರನ್ನು ಹೆಚ್ಚಿನ ವಿಚಾರಣೆ ಅವಶ್ಯಕತೆ ಇರುವ ಹಿನ್ನೆಲೆಯಲ್ಲಿ ಸಿಸಿಬಿ ಕಸ್ಟಡಿಗೆ ಕೇಳಿತ್ತು.

ಸಂಜನಾ ಡ್ರಗ್ ಮೂಲ ಬಗ್ಗೆ ವಿಚಾರಣೆ ಮಾಡಬೇಕಿದೆ. ಇನ್ನು ಸಿಮ್ ಇಲ್ಲದ ಮೊಬೈಲ್ ಬಳಕೆ ಮಾಡಿದ್ದಾರೆ. ಇದಲ್ಲದೆ ಸಂಜನಾಗೆ ಹಣ ಎಲ್ಲಿಂದ ಬಂತು ಎಂಬುದರ ಬಗ್ಗೆ ವಿವರ ತಿಳಿಯಲು ಹೆಚ್ಚಿನ ವಿಚಾರಣೆ ಪಡೆಯಬೇಕಿದೆ. ಹೀಗಾಗಿ ತಮ್ಮ ಕಸ್ಟಡಿಗೆ ನೀಡಬೇಕು ಎಂದು ಸಿಸಿಬಿ ನ್ಯಾಯಾಲದ ಮುಂದೆ ಕೇಳಿಕೊಂಡಿತ್ತು.



