ನವದೆಹಲಿ: ಡಿಎಂಕೆ ಸಂಸದ ಎಸ್.ಜಗತ್‌ರಕ್ಷಕನ್ ಹಾಗೂ ಅವರ ಕುಟುಂಬದ ಸದಸ್ಯರಿಗೆ ಸೇರಿದ 89.19 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡುವಂತೆ ಜಾರಿ ನಿರ್ದೇಶನಾಲಯ ಆದೇಶಿಸಿದೆ.
ಜಗತ್‌ರಕ್ಷಕನ್ ಹಾಗೂ ಅವರ ಕುಟುಂಬದವರು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘಿಸಿದ್ದಾರೆ. ಹೀಗಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ಜಗತ್‌ರಕ್ಷಕನ್ ಹಾಗೂ ಅವರ ಮಗ ಸಂದೀಪ್ ಆನಂದ್ ಅವರು ಸಿಂಗಪುರ ಮೂಲದ ಸಿಲ್ವರ್ ಪಾರ್ಕ್ ಇಂಟರ್‌ನ್ಯಾಷನಲ್ ಪ್ರೈ.ಲಿ.ಕಂಪನಿಯಿಂದ ಕ್ರಮವಾಗಿ 70 ಲಕ್ಷ ಷೇರು ಪಡೆದುಕೊಂಡಿದ್ದಾರೆ.ಇದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್‌ನ ಅನುಮೋದನೆ ಪಡೆದಿಲ್ಲ ಎಂದು ಇ.ಡಿ. ಹೇಳಿದೆ. 89.19 ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.



