ಡಿವಿಜಿ ಸುದ್ದಿ, ದಾವಣಗೆರೆ: ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ವಿಚಾರಣೆ ಎದುರಿಸುತ್ತಿರುವ ನಟಿ ರಾಗಿಣಿ ದ್ವಿವೇದಿ ಕೇವಲ ಬಿಜೆಪಿ ಪರ ಮಾತ್ರ ಪ್ರಚಾರ ಮಾಡಿಲ್ಲ. ಎಲ್ಲ ಪಕ್ಷದ ಪರನೂ ಪ್ರಚಾರಕ್ಕೆ ಬಂದಿದ್ದಾರೆ ಎಂದು ತೋಟಗಾರಿಕಾ, ಪೌರಾಡಳಿತ ಸಚಿವ ನಾರಾಯಣ ಗೌಡ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜಪಿ ಉಪಾಧ್ಯಕ್ಷ ವಿಜಯೇಂದ್ರ ಅವರು , ಈ ಹಿಂದೆ ಕೆ.ಆರ್ ಪುರ ಚುನಾವಣಾ ನೇತೃತ್ವ ವಹಿಸಿಕೊಂಡಿದ್ದರು. ಈ ವೇಳೆ ರಾಗಿಣಿಯವರು ವಿಜಯೇಂದ್ರ ಅವರ ಜೊತೆ ಇರುವ ಫೋಟೋವನ್ನು ವೈರಲ್ ಮಾಡ್ತಾ ಇದ್ದಾರೆ. ಅದೇ ರೀತಿ ಸಿದ್ದರಾಮಯ್ಯನವರ ಜೊತೆ ಕೂಡ ಫೋಟೋ ಇದೆಯಲ್ಲಾ ಎಂದು ಪ್ರಶ್ನಿಸಿದರು.
ಕೆಆರ್ ಪೇಟೆಯಲ್ಲಿ ರಾಗಿಣಿಗೆ ಹಿತೈಷಿಗಳು, ಚಿತ್ರರಂಗದವರು ಇದ್ದಾರೆ. ಅವರು ರಾಗಿಣಿಯನ್ನು ಪ್ರಚಾರಕ್ಕೆ ಕರೆಸಿ ಪ್ರಚಾರ ಮಾಡಿದ್ದೇವೆ. ರಾಗಿಣಿ ನಮ್ಮ ಪಕ್ಷಕ್ಕೆ ಸೇರುತ್ತಾರೆ ಎಂದು ಹೇಳಿಲ್ಲ. ಡ್ರಗ್ಸ್ ಎನ್ನುವುದು ಒಂದು ಮಾಫಿಯಾ, ಅದನ್ನು ನಾಶ ಪಡಿಸಬೇಕಿದೆ. ಇದರಲ್ಲಿ ರಾಜಕೀಯ ವ್ಯಕ್ತಿಗಳು ಇರಬಹುದು ಎಂದರು.
ಈ ವಿಚಾರದಲ್ಲಿ ಪೊಲೀಸರಿಗೆ ಕೂಡ ಸಂಪೂರ್ಣ ಸ್ವಾತಂತ್ರವಾಗಿ ತನಿಖೆ ನಡೆಸುತ್ತಿದ್ದಾರೆ. ಡ್ರಗ್ಸ್, ಅದೊಂದು ಮಾಫಿಯಾವಾಗಿದೆ. ಯಾವ ರಾಜಕಾರಣಿಗಳು ಇದ್ದರೂ ಅವರನ್ನು ಬಿಡೋದಿಲ್ಲ. ನಮ್ಮ ಪಕ್ಷದವರು ಆಗಿರಲಿ ಬೇರೆ ಪಕ್ಷದವರು ಆಗಿರಲಿ ಅವರನ್ನು ಬಿಡೋದಿಲ್ಲ ಎಂದು ಅವರು ಹೇಳಿದರು.



