ಮುಂಬೈ: ಮಹಾರಾಷ್ಟ್ರ ಮತ್ತು ಬಾಲಿವುಡ್ ನಟಿ ಕಂಗನಾ ರಣಾವತ್ ನಡುವೆ ವಾಕ್ಸಮರ ಮುಂದುವರೆದಿದೆ. ಶಿವಸೇನಾ ಅಲ್ಲ, ಅದು ಸೋನಿಯಾ ಸೇನೆ ಎಂದು ಕಿಡಿಕಾರಿದ್ದಾರೆ.
ಬೃಹತ್ ಮುಂಬೈ ಮುನಿಸಿಪಲ್ ಕಾರ್ಪೋರೇಶನ್ ಬುಧವಾರ ಕಂಗನಾ ಅವರ ಮನೆ ಮತ್ತು ಕಚೇರಿಯನ್ನು ಒಡೆದು ಹಾಕಿತ್ತು. ಈಗ ಈ ಪ್ರಕರಣ ಕೋರ್ಟಿನಲ್ಲಿದ್ದು, ಇಂದು ಇದರ ಪ್ರಕರಣ ವಿಚಾರಣೆ ನಡೆಯಲಿದೆ. ಇದಕ್ಕೂ ಮೊದಲು ಕಂಗನಾ ಶಿವಸೇನಾ ವಿರುದ್ಧ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
जिस विचारधारा पे श्री बाला साहेब ठाकरे ने शिव सेना का निर्माण किया था आज वो सत्ता केलिए उसी विचारधारा को बेच कर शिव सेना से सोनिया सेना बन चुके हैं, जीन गुंडों ने मेरे पीछे से मेरा घर तोड़ा उनको सिविक बॉडी मत बोलो, संविधान का इतना बड़ा अपमान मत करो 🙏 https://t.co/ZOnGqLMVXC
— Kangana Ranaut (@KanganaTeam) September 10, 2020
ಯಾವ ಸಿದ್ಧಾಂತವನ್ನು ಇಟ್ಟುಕೊಂಡು ಬಾಳಾ ಸಾಹೇಬ್ ಠಾಕ್ರೆ ಅವರು ಶಿವಸೇನಾವನ್ನು ಕಟ್ಟಿದರೋ, ಇಂದು ಅಧಿಕಾರಕ್ಕಾಗಿ ಅದೇ ಸಿದ್ಧಾಂತವನ್ನು ಮಾರಾಟ ಮಾಡುವ ಮೂಲಕ ಶಿವಸೇನಾ ಈಗ ಸೋನಿಯಾ ಸೇನೆ ಆಗಿದೆ. ಗೂಂಡಾಗಳು ನನ್ನ ಮನೆಯನ್ನು ಒಡೆದು ಹಾಕಿದ್ದಾರೆ. ಅವರನ್ನು ನಾಗರಿಕ ಅಧಿಕಾರಿಗಳು ಎಂದು ಕರೆಯಬೇಡಿ, ಅದು ಸಂವಿಧಾನದಕ್ಕೆ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರಣಿ ಟ್ವೀಟ್ ಮಾಡುತ್ತಿರುವ ಕಂಗನಾ, ಇಂದು ನನ್ನ ಧ್ವನಿಯನ್ನು ಮುಚ್ಚಿಸಲು ಪ್ರಯತ್ನ ಮಾಡಿದರೆ ಅದು ನಾಳೆ ಕೋಟಿ ಜನರ ಪ್ರತಿಧ್ವನಿಯಾಗಿ ಬದಲಾಗುತ್ತೆ. ಉದ್ಧವ್ ಠಾಕ್ರೆ ಗ್ಯಾಂಗ್ ಮತ್ತು ಕರಣ್ ಜೋಹರ್ ಗ್ಯಾಂಗ್ ನನ್ನ ಮನೆ ಆಫೀಸ್ ಅನ್ನು ಒಡೆದು ಹಾಕಿದೆ. ನನ್ನ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತದೆ. ಆದರೆ ನಾನು ಸತ್ತರೂ ನಿಮ್ಮ ಬಂಡವಾಳವನ್ನು ಬಹಿರಂಗ ಮಾಡುತ್ತೇನೆ ಎಂದು ಕಂಗನಾ ಸವಾಲ್ ಎಸೆದಿದ್ದಾರೆ.
Come Udhav Thakeray and Karan Johar Gang you broke my work place come now break my house then break my face and body, I want world to see clearly what you anyway do underhand, whether I live or die I will expose you regardless 🙂
— Kangana Ranaut (@KanganaTeam) September 9, 2020



