ಡಿವಿಜಿ ಸುದ್ದಿ, ಬೆಂಗಳೂರು: ಮುಂದಿನ ವರ್ಷದ ಜೂನ್ ಒಳಗೆ 25 ಸಾವಿರ ಮನೆ ನಿರ್ಮಾಣವಾಗದೇ ಹೋದ್ರೆ, ನಾನು ವಸತಿ ಇಲಾಖೆಗೆ ರಾಜೀನಾಮೆ ಕೊಡ್ತೀನಿ ಎಂದು ಸಚಿವ ವಿ ಸೋಮಣ್ಣ ಹೇಳಿದ್ದಾರೆ.
ವಸತಿ ಇಲಾಖೆಗೆ ಸಂಬಂಧಿಸಿದಂತೆ ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ಮನೆಗಳ ನಿರ್ಮಾಣದ ಕುರಿತು ಚರ್ಚೆ ನಡೆಯಿತು. ಸಭೆ ಬಳಿಕ ಮಾತನಾಡಿದರು .
ಒಂದು ಲಕ್ಷ ಮನೆ ಯೋಜನೆ ಸಂಬಂಧ ಸಭೆಯಲ್ಲಿ ಚರ್ಚಿಸಿದ್ದೇವೆ. ಬೆಂಗಳೂರು ಡಿಸಿ, ತಹಶೀಲ್ದಾರ್, ಸರ್ವೆ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳನ್ನೊಳಗೊಂಡು ಸಭೆ ನಡೆಸಿದ್ದೇವೆ ಎಂದರು.
ಒಟ್ಟು 900 ಎಕರೆ ಜಾಗ ಒಂದು ಲಕ್ಷ ಮನೆ ಯೋಜನೆಗೆ ಸಿಗಲಿದೆ. 35 ಸಾವಿರ ಹೊಸ ಮನೆಗೆ ಒಂದು ವಾರದಲ್ಲಿ ಟೆಂಡರ್ ಕರೆಯುತ್ತೇವೆ. 2021ರ ಜೂನ್ ಒಳಗೆ 25-30 ಸಾವಿರ ಮನೆ ಬಡವರಿಗೆ ಕೊಡ್ತೀವಿ. ಈಗಾಗಲೇ 31 ಸಾವಿರ ಫಲಾನುಭವಿಗಳು ಅರ್ಜಿ ಹಾಕಿದ್ದಾರೆ. ಇನ್ನೊಂದು ವಾರದಲ್ಲಿ ಮತ್ತೆ ಆನ್‍ಲೈನ್ ಮೂಲಕ ಅರ್ಜಿ ಕರೆಯುತ್ತೇವೆ. ಬಡವರಿಗೆ ಮನೆ ಕೊಡುವ ಕೆಲಸ ಮಾಡ್ತೀವಿ ಎಂದು ತಿಳಿಸಿದರು.



