ಡಿವಿಜಿ ಸುದ್ದಿ, ಬೆಂಗಳೂರು: ಡ್ರಗ್ಸ್ ಇಡೀ ದೇಶ, ಜಗತ್ತಿಗೆ ಮಾರಕವಾಗಿದೆ. ಇದಕ್ಕೆ ಯುವ ಜನತೆ ಬಲಿಯಾಗುತ್ತಿದ್ದಾರೆ. ಈ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಯಶ್, ಡ್ರಗ್ಸ್ ಮಾಫಿಯಾ ಎಲ್ಲಾ ಕಡೆ ಹರಡಿಕೊಂಡಿದೆ. ಆದರೆ, ಹೈಲೈಟ್ ಆಗಿದ್ದು ಕನ್ನಡ ಚಿತ್ರರಂಗ ಮಾತ್ರ. ಈ ಬಗ್ಗೆ ನಾವೆಲ್ಲರೂ ಒಟ್ಟಾಗಿ ಸಮಾಜದ ಪ್ರಜೆಯಾಗಿ ಚಿಕ್ಕಮಕ್ಕಳಿಂದಲೂ ಜಾಗೃತಿ ಮೂಡಿಸಬೇಕು ಎಂದರು.
ನಿಮ್ಮ ಜೀವನ, ನಿಮ್ಮ ದೇಹ ನಿಮ್ಮದಲ್ಲ. ಅದು ನಿಮ್ಮ ಅಪ್ಪ-ಅಮ್ಮ ಕೊಟ್ಟಿರುವುದು. ನಿಮ್ಮ ಪೋಷಕರು ನೀವು ಕೆಳಗೆ ಬೀಳದಂತೆ ಸಾಕಿದ್ದಾರೆ. ನನಗೂ ಮಕ್ಕಳಿದ್ದಾರೆ. ಪೋಷಕರು ಒಳ್ಳೆಯ ಊಟ ಕೊಟ್ಟು ಬೆಳೆಸಿರುತ್ತಾರೆ. ದೊಡ್ಡ ವ್ಯಕ್ತಿಯಾಗುವ ಕನಸು ಕಾಣುತ್ತಿರುತ್ತಾರೆ. ಆದರೆ, ಡ್ರಗ್ಸ್ ತೆಗೆದುಕೊಂಡು ಹಾಳಾಗಬೇಡಿ ಎಂದರು.ನಿಮ್ಮ ಪೋಷಕರಿಗಾಗಿ ಒಳ್ಳೆಯ ಹೆಸರು, ಗೌರವದಿಂದ ಕೆಲಸ ಮಾಡಿ. ಇಂತಹ ದುಶ್ಚಟಗಳನ್ನು ಬಿಡಿ ಎಂದು ಯಶ್ ಖಡಕ್ ಸಂದೇಶವನ್ನು ನೀಡಿದರು.
ಭೂಮಿ ಫಲವತ್ತಾಗಿದ್ದರೆ ಬೆಳೆ ಬೆಳೆಯಬಹುದು. ಭೂಮಿನೇ ಫಲವತ್ತಾಗಿಲ್ಲ ಅಂದರೆ ಏನು ಬೆಳೆಯೋದಕ್ಕೆ ಆಗುತ್ತೆ. ಆ ಸಂದರ್ಭದಲ್ಲಿ ನಾವಿದ್ದೀವಿ. ಸಾವಿರಾರು ಕಲಾವಿದರು, ತಂತ್ರಜ್ಞರು ಕಷ್ಟ ಪಟ್ಟು ಚಿತ್ರರಂಗದಲ್ಲಿ ಹೆಸರು ಮಾಡುವುದಕ್ಕೆ ಹಗಲಿರುಳು ಶ್ರಮಿಸುತ್ತಿದ್ದಾರೆ.

ರಾಜ್ಯದ ಮೂಲೆ ಮೂಲೆಗಳಿಂದ ಅನೇಕರು ಕನಸು ಕಟ್ಟಿಕೊಂಡು ಚಿತ್ರರಂಗಕ್ಕೆ ಬರುತ್ತಾರೆ. ಆದರೆ ಬಂದವರಿಗೆ ಸರಿಯಾದ ವೇದಿಕೆ ಸಿಗುವುದಿಲ್ಲ. ಹೀಗಾಗಿ ಅಂತಹವರಿಗೆ ಒಂದು ವೇದಿಕೆ ಮಾಡಿ, ಕಲಿಯಲು ತರಬೇತಿ ಕೊಟ್ಟರೆ ಚಿತ್ರರಂಗವೂ ಕೂಡ ಸಂಮೃದ್ಧವಾಗಿ ಬೆಳೆಯುತ್ತದೆ ಎಂಬುದು ನನ್ನ ನಂಬಿಕೆ. ಹೀಗಾಗಿ ನಮ್ಮ ಕಡೆಯಿಂದ ಉತ್ತಮ ತಂತ್ರಜ್ಞಾನ ಹಾಗೂ ಫಿಲ್ಮಂ ಸಿಟಿ ಬಗ್ಗೆ ಸಿಎಂ ಜೊತೆಗೆ ಮಾತನಾಡಿದ್ದೇವೆ ಎಂದು ಯಶ್ ತಿಳಿಸಿದರು.



