ಡಿವಿಜಿ ಸುದ್ದಿ,ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಮಾಫಿಯಾಗೆ ಸಂಬಂಧಿಸಿದಂತೆ ಬಂಧಿತರಾಗಿರುವ ನಟಿ ರಾಗಿಣಿ ದ್ವಿವೇದಿ, ಮಹಿಳಾ ಸಾಂತ್ವನ ಕೇಂದ್ರದಲ್ಲಿಯೇ ರಾತ್ರಿ ಕಳೆದಿದ್ದಾರೆ.
ಸಿಸಿಬಿ ಪೊಲೀಸರು ಶುಕ್ರವಾರ ರಾತ್ರಿ ಬಿಗಿ ಭದ್ರತೆಯೊಂದಿಗೆ ಡೈರಿ ಸರ್ಕಲ್ ಬಳಿ ಇರುವ ಮಹಿಳಾ ಸಾಂತ್ವನ ಕೇಂದ್ರಕ್ಕೆ ರಾಗಿಣಿಯನ್ನು ಕರೆದುಕೊಂಡು ಬಂದರು. ರಾಗಿಣಿ ಜೊತೆ ಸಾಂತ್ವನ ಕೇಂದ್ರದಲ್ಲಿಯೇ ಇಬ್ಬರು ಮಹಿಳಾ ಪೊಲೀಸರು ಉಳಿದುಕೊಂಡಿದ್ದಾರೆ.

ಸಾಂತ್ವನ ಕೇಂದ್ರದಲ್ಲಿ ಸೊಳ್ಳೆ ಕಾಟ ಇದ್ದುದ್ದರಿಂದ ಕೇವಲ ನಾಲ್ಕು ಗಂಟೆ ಮಾತ್ರ ನಟಿ ರಾಗಿಣಿಗೆ ನಿದ್ದೆ ಮಾಡಿದ್ದಾರೆ. 2 ಗಂಟೆಗೆ ಮಲಗಿ ಮುಂಜಾನೆ 6 ಗಂಟೆಗೆ ನಿದ್ದೆಯಿಂದ ಎದ್ದಿದ್ದಾರೆ. ತಮ್ಮ ಕೋಣೆಯಿಂದ ಹೊರಬಂದು ಸೊಳ್ಳೆ ಕಾಟದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ರಾತ್ರಿ ಊಟವನ್ನು ಕೂಡ ಸರಿಯಾಗಿ ಮಾಡಲಿಲ್ಲ ಎಂದು ತಿಳಿದು ಬಂದಿದೆ. ಅಲ್ಲದೇ ಮಹಿಳಾ ಸಾಂತ್ವನ ಕೇಂದ್ರದ ಬಳಿಯ ಆವರಣದಲ್ಲೇ ನಟಿ ರಾಗಿಣಿ ವಾಕಿಂಗ್ ಮಾಡುತ್ತಿದ್ದಾರೆ.



