ಡಿವಿಜಿ ಸುದ್ದಿ, ಕಲಬುರ್ಗಿ: ಟಿಪ್ಪು ಕುರಿತು ಎಂಎಲ್ಸಿ ಎಚ್. ವಿಶ್ವನಾಥ್ ಹೇಳಿಕೆ ವೈಯಕ್ತಿಕ. ಪಕ್ಷ ಟಿಪ್ಪು ಬಗ್ಗೆ ತನ್ನ ನಿಲುವು ಬದಲಾಯಿಸಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಅವರು, ಟಿಪ್ಪು ಸುಲ್ತಾನ್ ಈ ನೆಲದ ಮಣ್ಣಿನ ಮಗ. ಆತನ ಅಧ್ಯಾಯ ಪಠ್ಯದಲ್ಲಿ ಇರಬೇಕು ಎಂದು ಹೇಳಿಕೆ ನೀಡಿದ ಎಚ್. ವಿಶ್ವನಾಥ್ ರಿಂದ ವಿವರಣೆ ಪಡೆಯುತ್ತೇನೆ ಎಂದರು.
ವಿಜಯೇಂದ್ರ ಸೂಪರ್ ಸಿಎಂ ಎಂಬ ಕಾಂಗ್ರೆಸ್ ಮುಖಂಡರ ಆರೋಪಕ್ಕೆ ಪ್ರತಿಕ್ರಿಯಿಸಿ, ಯಡಿಯೂರಪ್ಪ ಅವರಂತಹ ನಾಯಕ ಕಾಂಗ್ರೆಸ್‌ನಲ್ಲಿ ಇಲ್ಲ. ಯಡಿಯೂರಪ್ಪ ದಕ್ಷರಿದ್ದು, ಸಮರ್ಥವಾಗಿ ಆಡಳಿತ ನಡೆಸುತ್ತಿದ್ದಾರೆ. ವಿಜಯೇಂದ್ರ ಸರ್ಕಾರದಲ್ಲಿ ಹಸ್ತಕ್ಷೇಪ ಮಾಡಿಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ನಾಯಕರು ಗೊಂದಲ ಸೃಷ್ಟಿಸಿ ಬೆಂಕಿ ಹಚ್ಚಿ ಸುಖ ಅನುಭವಿಸುತ್ತಾರೆ. ಡಿ.ಜೆ ಹಳ್ಳಿ ಗಲಭೆ ಕಾಂಗ್ರೆಸ್‌ನ ಆಂತರಿಕ ಗೊಂದಲದಿಂದ ಆಗಿದೆ. ಕಾಂಗ್ರೆಸ್ ವೃದ್ದಾಶ್ರಮವಾಗುತ್ತಿದೆ. ಅವರಿಗೆ ಪಕ್ಷದ ಅಧ್ಯಕ್ಷರನ್ನು ನೇಮಕ ಮಾಡಲು ಆಗುತ್ತಿಲ್ಲ ಎಂದರು.



