ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲಿದ್ದು, ಇಂದು 232 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
ಜಿಲ್ಲೆಯಲ್ಲಿಂದು 162 ಮಂದಿ ಗುಣಮುಖರಾಗಿದ್ದು, ಒಟ್ಟು ಗುಣಮುಖರಾಗಿ ಡಿಸ್ಚಾರ್ಜ್ ಆದವರ ಸಂಖ್ಯೆ 5792ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 7760 ಮಂದಿ ಸೋಂಕಿತರಿದ್ದಾರೆ. ಇಂದು ಕೊರೊನಾದಿಂದ 5 ಮಂದಿ ಮೃತಪಟ್ಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 172ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ 1796 ಸಕ್ರಿಯ ಪ್ರಕರಣಗಳಿವೆ.
ಇಂದು ದಾವಗೆರೆಯಲ್ಲಿ 103, ಹರಿಹರ 60, ಜಗಳೂರು 04, ಚನ್ನಗಿರಿ 30, ಹೊನ್ನಾಳಿ 26 ಹಾಗೂ ಹೊರ ಜಿಲ್ಲೆಯಿಂದ ಬಂದ 09 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ.
ರಾಜೇಂದ್ರ ಬಡಾವಣೆಯ 46 ವರ್ಷದ ಪುರುಷ, ರಾಣೇಬೆನ್ನೂರಿನ55 ವರ್ಷದ ಪುರುಷ, ಬಸಾಪುರದ 60 ವರ್ಷದ ವೃದ್ಧ, ಜಗಳೂರಿನ ಜಿಎಚ್ ಕ್ವಾಟರ್ಸ್ ನ 78 ವರ್ಷದ ಮಹಿಳೆ ಹಾಗೂ ಹೊನ್ನೂರಿನ 65 ವರ್ಷದ ವೃದ್ಧೆ ಸಾವನ್ನಪ್ಪಿದ್ದಾರೆ.



