ಡಿವಿಜಿ ಸುದ್ದಿ, ಭದ್ರಾವತಿ: ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗಳ ಕೃಷಿ ಮತ್ತು ಕುಡಿಯುವ ನೀರಿನ ಜೀವನಾಡಿಯಾಗಿರುವ ಭದ್ರಾ ಡ್ಯಾಂ ಭರ್ತಿಗೆ 3 ಅಡಿ ಮಾತ್ರ ಬಾಕಿ ಇದೆ.
ಇಂದು ಬೆಳಗ್ಗೆಯ ಹೊತ್ತಿಗೆ ಭದ್ರಾ ಡ್ಯಾಂ ನೀರಿನ ಮಟ್ಟ 182.9 ಅಡಿಗೆ ತಲುಪಿದೆ. ಈ ಮೂಲಕ ಗರಿಷ್ಟ 186 ಅಡಿ ಹೊಂದಿರುವ ಭದ್ರಾ ಡ್ಯಾಂ ಭರ್ತಿಗೆ ಇನ್ನು ಮೂರು ಅಡಿ ಮಾತ್ರ ಬಾಕಿ ಉಳಿದಂತಾಗಿದೆ. ಈ ಬಾರಿಯ ಮುಂಗಾರು ಸ್ವಲ್ಪ ವಿಳಂಬವಾಗಿ ಬಂದರೂ, ಡ್ಯಾಂ ಭರ್ತಿಯಾಗಿದೆ. ಇದರಿಂದ ರೈತರ ಮುಖದಲ್ಲಿ ಸಂತಸ ಮೂಡಿದ್ದು, ಈ ವರ್ಷದ ಎರಡು ಬೆಳೆ ಬೆಳೆಯುವ ಉತ್ಸಾಹದಲ್ಲಿದ್ದಾರೆ.
71.535 ಟಿಎಂಸಿ ಸಾಮಾರ್ಥ್ಯ ಹೊಂದಿರುವ ಭದ್ರಾ ಡ್ಯಾಂ ಈಗಾಗಲೇ 67.574 ಟಿಎಂಸಿ ನೀರು ಸಂಗ್ರಹವಾಗಿದೆ. ಒಳ ಹರಿವು 5,124 ರಷ್ಟಿದ್ದು, ಒಟ್ಟು ಹೊರ ಹರಿವು 3,064 ರಷ್ಟಿದೆ. ಕಳೆದ ವರ್ಷ ಈ ದಿನ 185.6 ಅಡಿಯಷ್ಟು ನೀರು ಸಂಗ್ರಹವಾಗಿತ್ತು. ಸತತ ಮೂರು ವರ್ಷವೂ ಭದ್ರಾ ಡ್ಯಾಂ ತುಂಬಿದಂತಾಗಿದೆ.
- ಇಂದಿನ ನೀರಿನ ಮಟ್ಟ: 182’9 3/4″
- ಪೂರ್ಣ ಮಟ್ಟ:186′ ಅಡಿ
- ಇಂದಿನ ಸಾಮರ್ಥ್ಯ: 67.574 ಟಿಎಂಸಿ
- ಒಟ್ಟು ಸಾಮರ್ಥ್ಯ:71.535 ಟಿಎಂಸಿ
- ಒಳಹರಿವು:5124 ಕ್ಯೂಸೆಕ್ಸ್
- ಒಟ್ಟು ಹೊರಹರಿವು:3064 ಕ್ಯೂಸೆಕ್ಸ್
- ಬಲದಂಡೆ ನಾಲೆ: 2500 ಕ್ಯೂಸೆಕ್ಸ್
- ಎಡದಂಡೆ ನಾಲೆ: 400 ಕ್ಯೂಸೆಕ್ಸ್
- ಕ್ರೆಸ್ಟ್ ಗೇಟ್ ಮುಖಾಂತರ: 0.00 ಕ್ಯೂಸೆಕ್ಸ್
- ರಿವರ್ ಬೆಡ್ ಯುನಿಟ್: 0.00 ಕ್ಯೂಸೆಕ್ಸ್
- ಸ್ಲೂಯಿಸ್ ಗೇಟ್ ಮುಖಾಂತರ ನದಿಗೆ: 50 ಕ್ಯೂಸೆಕ್ಸ್
- ಆವಿಯಾಗುವಿಕೆ: 114 ಕ್ಯೂಸೆಕ್ಸ್
- ಕಳೆದ ವರ್ಷದ ಮಟ್ಟ:185’6 1/2″ಅಡಿ
- ಸಾಮರ್ಥ್ಯ: 70.950 ಟಿ ಎಂ ಸಿ