ಡಿವಿಜಿ ಸುದ್ದಿ, ಕೊಪ್ಪಳ: ಜನರ ಸಂಕಷ್ಟಗಳಿಗೆ ನೆರವಾಗಬೇಕಿದ್ದ ತಾಲೂಕು ದಂಡಾಧಿಕಾರಿ, ತಮ್ಮ ಕಚೇರಿಯಲ್ಲಿಯೇ ರೊಮ್ಯಾನ್ಸ್ ನಡೆಸಿ ಸಿಕ್ಕಿಬಿದ್ದಿರುವ ಘಟನೆ ಜಿಲ್ಲೆಯ ಕುಷ್ಠಗಿ ತಹಶೀಲ್ದಾರ್ ಕಚೇರಿಯಲ್ಲಿ ನಡೆದಿದೆ.
ಈಗ ಕೊಪ್ಪಳ ನಗರಾಭಿವೃದ್ಧಿ ಕೋಶದಲ್ಲಿ ತಹಶೀಲ್ದಾರ್ ಆಗಿರುವ ಗುರುಬಸವರಾಜ್ , ಈ ಹಿಂದೆ ಕೂಷ್ಟಗಿಯ ತಹಶೀಲ್ಆರ್ ಆಗಿದ್ದ ವೇಳೆ ಈ ಕಾರ್ಯ ನಡೆಸಿದ್ದರು. ತಮ್ಮ ಕಚೇರಿಯಲ್ಲಿಯೇ ಸಹೋದ್ಯೋಗಿ ಜೊತೆ ರೋಮ್ಯಾನ್ಸ್ ನಡೆಸಿದ ವಿಡಿಯೋಗ ಈಗ ವೈರಲ್ ಆಗಿದೆ.
ಕಳೆದ 8 ತಿಂಗಳ ಹಿಂದೆ ಈ ಪ್ರಕರಣ ನಡೆದಿದೆ ಎನ್ನಲಾಗುತ್ತಿದೆ. ಈ ಪ್ರಕರಣದ ಬಯಲಾಗುವ ಮುನ್ಸೂಚನೆ ಸಿಕ್ಕಿದ್ದ ತಹಶೀಲ್ದಾರ್ ಕುಷ್ಟಗಿಯಿಂದ ವರ್ಗಾವಣೆಯಾಗಿದ್ದಾರೆ. ತಹಶೀಲ್ದಾರ್ ಈ ನಡೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು,ತಹಶೀಲ್ದಾರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.



