Connect with us

Dvgsuddi Kannada | online news portal | Kannada news online

ಕಳೆದ ವರ್ಷದಿಂದಲೇ 2 ಸಾವಿರ ನೋಟು ಮುದ್ರಿಸಿಲ್ಲ: ಆರ್ ಬಿಐ

Home

ಕಳೆದ ವರ್ಷದಿಂದಲೇ 2 ಸಾವಿರ ನೋಟು ಮುದ್ರಿಸಿಲ್ಲ: ಆರ್ ಬಿಐ

 ಮುಂಬೈ: ಕಳೆದ ಹಣಕಾಸು ವರ್ಷ 2019-20ರಲ್ಲಿ 2 ಸಾವಿರ ಮುಖಬೆಲೆಯ ಕರೆನ್ಸಿ ನೋಟು ಮುದ್ರಿಸಿಲ್ಲ. ಹೀಗಾಗಿ ಆ ವರ್ಷದಿಂದಲೇ  ನೋಟುಗಳ ಚಲಾವಣೆ ಕೂಡ ಕಡಿಮೆಯಾಗಿದೆ ಎಂದು ಆರ್‌ಬಿಐ ತಿಳಿಸಿದೆ.

2 ಸಾವಿರ ನೋಟುಗಳ ಬಳಕೆಯ ಸಂಖ್ಯೆ 2018ರಿಂದ ಕ್ರಮೇಣ ಕಡಿಮೆಯಾಗಿದೆ. 2018ರ ಮಾರ್ಚ್ ಅಂತ್ಯದ ವೇಳೆಗೆ 33,632 ಲಕ್ಷ ನೋಟುಗಳು ಚಲಾವಣೆಯಲ್ಲಿದ್ದವು, 2019ರ ಮಾರ್ಚ್ ಅಂತ್ಯದ ವೇಳೆಗೆ ಈ ಸಂಖ್ಯೆ 32,910 ಲಕ್ಷ ನೋಟುಗಳಿಗೆ ಇಳಿದಿತ್ತು. 2020ರ ಮಾರ್ಚ್ ಅಂತ್ಯದ ವೇಳೆಗೆ ಇದು ಮತ್ತಷ್ಟು ಕಡಿಮೆಯಾಗಿ 27,398 ಲಕ್ಷಕ್ಕೆ ಇಳಿದೆ ಆರ್‌ಬಿಐ ತಿಳಿಸಿದೆ.

rbi

2 ಸಾವಿರ ನೋಟುಗಳ ಪಾಲು 2018ರ ಮಾರ್ಚ್ ಅಂತ್ಯದ ವೇಳೆಗೆ 3.3 ರಷ್ಟಿತ್ತು. 2019ರ ಮಾರ್ಚ್ ಅಂತ್ಯದ ವೇಳೆಗೆ ಶೇ 3ರಷ್ಟಾಗಿತ್ತು. ಇದೀಗ 2020ರ ಮಾರ್ಚ್ ಅಂತ್ಯದ ವೇಳೆಗೆ ಶೇ 2.4ಕ್ಕೆ ಇಳಿಕೆಯಾಗಿದೆ. ಇದೇ ವೇಳೆ 500 ಮತ್ತು 200 ಮುಖಬೆಲೆಯ ನೋಟುಗಳ ಚಲಾವಣೆಯಲ್ಲಿ ಏರಿಕೆ ಕಂಡು ಬಂದಿದೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in Home

To Top