ನವದೆಹಲಿ: ನವಿಲು ಗರಿ ಬಿಟ್ಟಿ ಕುಣಿವುದನ್ನು ನೋಡುವುದೇ ಒಂದು ಆನಂದ. ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ಗರಿ ಬಿಚ್ಚಿ ಕುಣಿದ ನವಿಲಿನ ಮನಮೋಹಕವನ್ನು ಸಾಮಾಜಿಕ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
https://m.facebook.com/narendramodi/videos/338632440836002/?locale2=de_DE
ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರಾಣಿ, ಪಕ್ಷಿಗಳ ಮೇಲೆ ಬಹಳ ಪ್ರೀತಿ. ಈ ಕಾರಣಕ್ಕೆ ತಮ್ಮ ನಿವಾಸದಲ್ಲಿ ನವಿಲುಗಳನ್ನು ಸಾಕಿದ್ದು, ವಿಡಿಯೋ ರಿಲೀಸ್ ಮಾಡಿದ್ದಾರೆ.ದೆಹಲಿಯ ಲೋಕಕಲ್ಯಾಣ್ ಮಾರ್ಗದಲ್ಲಿರುವ ನಿವಾಸದಲ್ಲಿರುವ ಜಾಗವನ್ನು ಗ್ರಾಮೀಣ ಭಾಗದಲ್ಲಿರುವಂತೆ ಬದಲಾವಣೆ ಮಾಡಿದ್ದಾರೆ. ಹೀಗಾಗಿ ಈ ಜಾಗದಲ್ಲಿ ಹಲವು ಪಕ್ಷಿಗಳು ಗೂಡುಗಳನ್ನು ಕಟ್ಟಿಕೊಂಡಿವೆ.

ವಿಡಿಯೋದಲ್ಲಿ ಪ್ರಧಾನಿ ಮೋದಿಯವರು ತಮ್ಮ ನಿವಾಸದ ಹೊರಗಡೆ ಮತ್ತು ಒಳಗಡೆ ನವಿಲುಗಳಿಗೆ ಆಹಾರ ಹಾಕುತ್ತಿರುವ ದೃಶ್ಯವಿದೆ. ಅಷ್ಟೇ ಅಲ್ಲದೇ ಮೋದಿ ಬೆಳಗ್ಗೆ ವಾಕಿಂಗ್ ಮಾಡುವ ವೇಳೆ ನವಿಲು ಗರಿ ಬಿಚ್ಚಿ ಅವರ ಜೊತೆ ಹೆಜ್ಜೆ ಹಾಕುತ್ತಿವೆ.

ವಿಡಿಯೋದಲ್ಲಿ ಪ್ರಧಾನಿ ಓದುತ್ತಿದ್ದಾಗ ನವಿಲು ಆಹಾರವನ್ನು ತಿನ್ನುತ್ತಿರುವ ಫೋಟೋ ಸಹ ಇದೆ.1 ನಿಮಿಷ 47 ಸಕೆಂಡಿನ ವಿಡಿಯೋವನ್ನು ಫೇಸ್‍ಬುಕ್, ಯೂ ಟ್ಯೂಬ್, ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಫೇಸ್‍ಬುಕ್‍ನಲ್ಲಿ ಅಪ್ಲೋಡ್ ಆದ ಒಂದು ಗಂಟೆಯ ಒಳಗಡೆ ವಿಡಿಯೋ 10 ಲಕ್ಷಕ್ಕೂ ಜನ ವೀಕ್ಷಿಸಿದ್ದಾರೆ.




