ಡಿವಿಜಿ ಸುದ್ದಿ, ಧಾರವಾಡ: ಬಿಜೆಪಿ ಸರ್ಕಾರ ತಾಳ, ತಂತಿ ಎರಡೂ ಇಲ್ಲದ ಸರ್ಕಾರ. ಇದು ವಲಸಿಗರು ಮತ್ತು ಮೂಲರ ಮಧ್ಯೆ ನಡೆಯುತ್ತಿರುವ ಸರ್ಕಾರ ಎಂದು ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ವ್ಯಂಗ್ಯವಾಡಿದರು.
ಧಾರವಾಡದಲ್ಲಿ ರಾಜ್ಯ ಸರ್ಕಾರದ ಭೂಸುಧಾರಣೆ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಇತ್ತು. ಬಿಜೆಪಿ-ಜೆಡಿಎಸ್ ಸರ್ಕಾರವೂ ರಚನೆ ಆಗಿತ್ತು. ಆದರೆ ಈಗ ಇರುವುದು ಮೂರು ಪಕ್ಷದ ಸರ್ಕಾರ ಎಂದರು.
ಸದ್ಯ ನಾವಂತೂ ವಿರೋಧ ಪಕ್ಷದಲ್ಲಿದ್ದೇವೆ. ಭೂ ಸುಧಾರಣೆ ಕಾಯ್ದೆ ಸೇರಿ ಪ್ರಮುಖ ಬೇಡಿಕೆಗಳಿವೆ. ಇವೆಲ್ಲವನ್ನೂ ಸರಿಮಾಡಬೇಕು. ಇಲ್ಲದೇ ಹೋದಲ್ಲಿ ಬರುವ ಅಧಿವೇಶನದಲ್ಲಿ ಸರ್ಕಾರಕ್ಕೆ ಇದೆ ಮಾರಿ ಹಬ್ಬ ಎಂದು ಕಿಡಿಕಾರಿದರು.
ಕೃಷಿ ಸಚಿವ ಬಿ.ಸಿ ಪಾಟೀಲ್ ಅವರನ್ನು ಹೋರಿಗೆ ಹೋಲಿಸಿ ಮಾತನಾಡಿ, ಸರ್ಕಾರದಲ್ಲಿ ಎಷ್ಟು ಬೇಕು ಅಷ್ಟು ಮೇಯ್ಲಿ. ನಮ್ಮೂರ ಹೋರಿ ಎಲ್ಲಿ ಎಷ್ಟು ಮೇಯ್ದರೇನು, ಮತ್ತೇ ನಮ್ಮ ಮನೆಗೆ ಬರಬೇಕು ಎಂದರು. ಬಿ.ಸಿ. ಪಾಟೀಲ್ ನಮ್ಮೂರಿನ ಹೋರಿ ಎಂದರು.