ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇಂದು ಕೂಡ 244 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ಇಂದು 381 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 6,270 ಮಂದಿಯಲ್ಲಿ 4,230 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ. ಇಂದು 05 ಮಂದಿ ಮೃತಪಟ್ಟಿದ್ದು, ಮೃತರ ಸಂಖ್ಯೆ 141ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಇನ್ನು 1,899 ಸಕ್ರಿಯ ಕೇಸ್ ಗಳಿವೆ.
ಜಿಲ್ಲಯಲ್ಲಿ ಇಂದು ಪತ್ತೆಯಾದ ಕೇಸ್ ಗಳಲ್ಲಿ ದಾವಣಗೆರೆ133, ಹರಿಹರ 28 ,ಜಗಳೂರು 08,ಚನ್ನಗಿರಿ 39,ಹೊನ್ನಾಳಿ 32, ಹೊರ ಜಿಲ್ಲೆಯ 04 ಮಂದಿಯಲ್ಲಿ ಕೊರೊನಾ ಸೋಂಕು ತಗುಲಿದೆ. ಆನಗೋಡಿನ 51 ವರ್ಷದ ಮಹಿಳೆ,ವಿನೋಬ ನಗರದ 63 ವರ್ಷದ ವೃದ್ಧ, ಎಂಸಿಸಿ ಬಿ ಬ್ಲಾಕ್ ನ 68 ವರ್ಷದ ವೃದ್ಧ, ಲೇಬರ್ ಕಾಲೋನಿಯ 60 ವರ್ಷದ ವೃದ್ಧ ಹಾಗೂ ಬೆಳವನೂರಿನ 75 ವರ್ಷದ ವೃದ್ಧೆ ಸಾವನ್ನಪ್ಪಿದ್ದಾರೆ.