ಡಿವಿಜಿ ಸುದ್ದಿ, ಹರಪನಹಳ್ಳಿ: ಈ ಬಾರಿಯ SSLC ಪರೀಕ್ಷೆಯಲ್ಲಿ ತಾಲ್ಲೂಕಿನ ಉಚ್ಚoಗಿದುರ್ಗದ ಶ್ರೀ ಉತ್ಸವಾoಭ ಪ್ರೌಢಶಾಲೆಯ ವಿದ್ಯಾರ್ಥಿನಿ ಉಷಾ 625ಕ್ಕೆ 613 ಅಂಕ ಗಳಿಸುವ ಮೂಲಕ ತಾಲ್ಲೂಕಿನಲ್ಲಿ ಮೊದಲ ಸ್ಥಾನ ಪಡೆದಿದ್ದಾಳೆ.
ಉಚ್ಚoಗಿದುರ್ಗ ಗ್ರಾಮದ ಬಡ ರೈತ ಅಂಜಿನಪ್ಪ ಹಾಗೂ ರತ್ನಮ್ಮ ನ ಮಗಳಾದ ಉಷಾ ಶೇ. 98% ಅಂಕಗಳಿಸಿದ್ದು, 625 ಕ್ಕೆ 613 ಅಂಕ ಗಳಿಸಿದ್ದಾಳೆ. ತಂದೆ ಬಡ ರೈತನಾಗಿದ್ದು, ಕೃಷಿಕರಾಗಿದ್ದಾರೆ. ಮೂವರು ಹೆಣ್ಣು ಮಕ್ಕಳು, ಒಂದು ಗಂಡು ಮಗುವಿದ್ದು ಉಷಾ ಮೊದಲ ಮಗಳಗಿದ್ದಾಳೆ.
ನನ್ನ ಮಗಳು ತಾಲ್ಲೂಕಿಗೆ ಮೊದಲು ಬಂದಿದ್ದಾಳೆ ಎಂದು ತಿಳಿದ ತಕ್ಷಣ ತುಂಬಾ ಖುಷಿಯಾಯಿತು. ನಾವು ಕೂಲಿ ಕೆಲಸ ಮಾಡುತ್ತಿದ್ದು, ನನ್ನ ಮಗಳಾದರೂ ಉನ್ನತ ಅಧಿಕಾರಿಯಾಗಲಿ ಎಂಬುದು ನಮ್ಮ ಆಶಯ. ನಾವು ಬಡ ಕೂಲಿ ಕಾರ್ಮಿಕರು, ಹೆಚ್ಚಿನ ವಿದ್ಯಾಭ್ಯಾಸಕ್ಕೆ ದಾವಣಗೆರೆಗೆ ಕಳುಹಿಸಬೇಕು. ಆದರೆ, ನಮ್ಮಲ್ಲಿ ಸಾಕಷ್ಟು ಹಣವಿಲ್ಲ. ಸರ್ಕಾರ ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದರೆ ಕಳುಹಿಸುತ್ತೇನೆ ಎಂದು ಉಷಾ ತಂದೆ ರೈತ ಅಂಜಿನಪ್ಪ ತಿಳಿಸಿದ್ದಾರೆ.
ಉಷಾ ನಮ್ಮ ಶಾಲೆ, ಊರಿಗೆ ಕೀರ್ತಿಯನ್ನು ತಂದಿದ್ದಾರೆ. ನಾವು ಉತ್ತಮ ಫಲಿತಾಂಶಕ್ಕಾಗಿ ಬೆಳೆಗ್ಗೆ ಹಾಗೂ ಸಂಜೆ ವಿಶೇಷ ತರಗತಿಗಳನ್ನು ಮಾಡಿದ್ದೇವು. ಉಷಾ ಪ್ರತಿ ದಿನ ವ್ಯವಸ್ಥಿತವಾಗಿ ಅಂದಿನ ಪಾಠ ಅಂದೆ ಓದುತ್ತಿದ್ದಳು ಎಂದು ಮುಖ್ಯ ಶಿಕ್ಷಕ ಪ್ರಸನ್ನ ಕುಮಾರ್ ತಿಳಿಸಿದ್ದಾರೆ.
ಗ್ರಾಮೀಣ ಭಾಗದ ವಿದ್ಯಾರ್ಥಿನಿ 613 ಮಾರ್ಕ್ಸ್ ತಗೆದು, ತಾಲ್ಲೂಕಿಗೆ ಮೊದಲು ಬಂದಿದ್ದೂ ಉತ್ತಮ ಸಾಧನೆ. ವಿದ್ಯಾರ್ಥಿನಿ ಮುಂದೆ ಇನ್ನೂ ಹೆಚ್ಚು ಸಾಧನೆ ಮಾಡಲಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಎಂ ವೀರಭದ್ರಯ್ಯ ಶುಭಕೋರಿದರು.