ಡಿವಿಜಿ ಸುದ್ದಿ, ಬೆಂಗಳೂರು: ರಾಮನ ಅಸ್ತಿತ್ವ ಪ್ರಶ್ನೆ ಮಾಡುವ ಕಾಂಗ್ರೆಸ್ಸಿಗರೇ, ಮೊದಲು ನಿಮ್ಮ ಅಸ್ತಿತ್ವ ಉಳಿಸಿಕೊಳ್ಳಿ ಎಂದು ಪ್ರವಾಸೋದ್ಯಮ ಸಚಿವ ಸಿಟಿ ರವಿ ಕಾಂಗ್ರೆಸ್ ನಾಯಕರನ್ನು ಕಾಲೆಳೆದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ ಅವರು, ರಾಮ ಮಂದಿರ ಭೂಮಿ ಪೂಜೆಯ ನೇರ ಪ್ರಸಾರ ನೋಡಿದವರು 16 ಕೋಟಿ ಜನ. ಅಂದರೆ ಕಾಂಗ್ರೆಸ್ ಪಕ್ಷ 2019 ರಲ್ಲಿ ಪಡೆದ ಮತಗಳಿಗಿಂತ ಶೇ.6ರಷ್ಟು ಹೆಚ್ಚು ಎಂದು ಬರೆದುಕೊಂಡಿದ್ದಾರೆ.
ರಾಮ ಮಂದಿರ ಭೂಮಿ ಪೂಜೆಯ ನೇರ ಪ್ರಸಾರ ನೋಡಿದವರು 16 ಕೋಟಿ ಜನ.
ಅಂದರೆ ಕಾಂಗ್ರೆಸ್ ಪಕ್ಷ 2019 ರಲ್ಲಿ ಪಡೆದ ಮತಗಳಿಗಿಂತ 6% ಹೆಚ್ಚು.
ರಾಮನ ಅಸ್ತಿತ್ವ ಪ್ರಶ್ನೆ ಮಾಡಿದ ಕಾಂಗ್ರೆಸ್ಸಿಗರೇ, ಮೊದಲು ನಿಮ್ಮ ಅಸ್ತಿತ್ವ ಉಳಿಸಿಕೊಳ್ಳಿ.
— C T Ravi 🇮🇳 ಸಿ ಟಿ ರವಿ (@CTRavi_BJP) August 8, 2020
ಕಳೆದ ವಾರ ಉಡುಪಿಯಲ್ಲಿ ಮಾತನಾಡಿದ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ರಾಮ ಮಂದಿರ ನಿರ್ಮಾಣವಾದರೆ ಕೊರೊನಾ ದೂರವಾಗಲ್ಲ. ಬಿಜೆಪಿಯವರು ಅವೈಜ್ಞಾನಿಕವಾಗಿ ಮಾತನಾಡುವುದನ್ನು ಬಿಡಬೇಕು ಎಂದು ಹರಿಹಾಯ್ದಿದ್ದರು.



