ಡಿವಿಜಿ ಸುದ್ದಿ.ಕಾಂ, ಬೆಂಗಳೂರು: ಉತ್ತರ ಕರ್ನಾಟಕ ಪ್ರವಾಹ ಪರಿಹಾರಕ್ಕೆ ಕೇಂದ್ರ ಸರ್ಕಾರದಿಂದ ಎರಡು ದಿನದಲ್ಲಿ ಪರಿಹಾರ ನಿಧಿ ಘೋಷಣೆಯಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ತಮ್ಮ ನಿವಾಸ ಬಳಿ ಸುದ್ಧಿಗಾರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರು ಬಂದು ಚರ್ಚಿಸಿ ಹೋಗಿದ್ದಾರೆ. ಕರ್ನಾಟಕ ಸೇರಿದಂತೆ ನಾಲ್ಕೈದು ರಾಜ್ಯದಲ್ಲಿ ಉಂಟಾಗಿರುವ ಪ್ರವಾಹಕ್ಕೆ ಕೇಂದ್ರದಿಂದ ಒಂದೆರಡು ದಿನದಲ್ಲಿ ಪರಿಹಾರ ಘೋಷಣೆಯಾಗಲಿದೆ ಎಂದರು.
ಉಪ ಚುನಾವಣೆ ಮತ್ತೆ ಘೋಷಣೆಯಾಗಿದೆ. ಚುನಾವಣೆ ಎದುರಿಸಲುನಾವು ಸಿದ್ಧರಿದ್ದೇವೆ. ಉಪ ಚುನಾವಣೆ ಸಬಂಧ ಪಕ್ಷದ ವರಿಷ್ಠರೊಂದಿಗೆ ಮಾತನಾಡುತ್ತೇನೆ ಎಂದರು.
ಅ.1ಕ್ಕೆ ಸಚಿವ ಸಂಪುಟ ಸಭೆ ನಿಗದಿಯಾಗಿದ್ದು, ಸಭೆಯಲ್ಲಿ ಕೆಲವು ಮಹತ್ವ ವಿಷಯಗಳ ಕುರಿತು ಚರ್ಚೆ ಮಾಡಲಾಗುವುದು. ಬಳ್ಳಾರಿ ಜಿಲ್ಲೆ ವಿಭಜಿಸಿದ ವಿಜಯನಗರ ಜಿಲ್ಲೆ ರಚಿಸಲು ಎಲ್ಲ ಪಕ್ಷದ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಾಗುವುದು ಎಂದರು.



