ಡಿವಿಜಿ ಸುದ್ದಿ, ಚಿಕ್ಕಮಗಳೂರು: ಅಪರೂಪದ ಕಾಟಿ ತಳಿಯ ಕಾಡೆಮ್ಮೆ ಸಂತತಿ ಜಿಲ್ಲೆಯ ಭದ್ರಾ ಹುಲಿ ಸಂರಕ್ಷಿತ ಅರಣ್ಯದ ಮುತ್ತೋಡಿ ವಲಯದಲ್ಲಿ ಪತ್ತೆಯಾಗಿದೆ.
ಕಾಡೆಮ್ಮೆಗಳು ಕಪ್ಪು ಬಣ್ಣದಿಂದ ಕೂಡಿರುತ್ತವೆ. ಆದರೆ ಕಾಟಿ ತಳಿಯ ಈ ಕಾಡೆಮ್ಮೆ ಬಂಗಾರದ ಬಣ್ಣದಿಂದ ಕಂಗೊಳಿಸುತ್ತಿದೆ. ಈ ಅಪರೂಪದ ಕಾಡೆಮ್ಮೆ ಬಣ್ಣ ಹಾಗೂ ಮೈಕಟ್ಟು ನೋಡುಗರಲ್ಲಿ ಅಚ್ಚರಿ ಮೂಡಿಸಿದೆ.
80-90ರ ದಶಕದಲ್ಲಿ ಈ ತಳಿಯ ಕಾಡೆಮ್ಮೆಗಳು ಕಾಫಿನಾಡ ಚಿಕ್ಕಮಗಳೂರಿನ ಅರಣ್ಯದಲ್ಲಿ ಇತ್ತು. ಈ ತಳಿ ಸಂಪೂರ್ಣ ನಾಶವಾಗಿತ್ತು.ಆದರೆ, ಇದೀಗ ಮತ್ತೆ ಈ ಕಾಡೆಮ್ಮೆ ಪತ್ತೆಯಾಗಿರೋದು ಈ ತಳಿಗಳ ಬೆಳವಣಿಗೆಯಾಗಿದೆ ಎಂದೇ ಭಾವಿಸಲಾಗಿದೆ.
ಈ ಸಂತತಿ ಈಗ ಮತ್ತೆ ಹೆಚ್ಚಾಗಿರುವುದರಿಂದ ಪ್ರವಾಸಿಗರ ಕಣ್ಣಿಗೆ ಬಿದ್ದಿದೆ ಎಂದು ಹೇಳಲಾಗಿದೆ. ಚಿನ್ನದ ಲೇಪನದಂತೆ ಹೊಳೆಯುವ ಕಾಡೆಮ್ಮೆಯೊಂದು ಕಂಡಿದ್ದು. ಈ ಭಾಗದಲ್ಲಿ ಈ ರೀತಿಯ ಕಾಡೆಮ್ಮೆ ಕಾಣ ಸಿಗುವುದು ವಿಶೇಷ.



