Connect with us

Dvgsuddi Kannada | online news portal | Kannada news online

ಕೊರೊನಾ ಚಿಕಿತ್ಸೆ ನಡುವೆಯೇ ಪುತ್ತಿಗೆ ಶ್ರೀಗಳಿಂದ ಆಸ್ಪತ್ರೆಯಲ್ಲಿ ನಿತ್ಯ ಪೂಜೆ

ಪ್ರಮುಖ ಸುದ್ದಿ

ಕೊರೊನಾ ಚಿಕಿತ್ಸೆ ನಡುವೆಯೇ ಪುತ್ತಿಗೆ ಶ್ರೀಗಳಿಂದ ಆಸ್ಪತ್ರೆಯಲ್ಲಿ ನಿತ್ಯ ಪೂಜೆ

ಡಿವಿಜಿ ಸುದ್ದಿ, ಉಡುಪಿ: ಪುತ್ತಿಗೆ ಸ್ವಾಮೀಜಿಗೆ ಕೊರೊನಾ ಸೋಂಕು ಬಂದಿರುವ ಹಿನ್ನೆಲೆ ಮಣಿಪಾಲ ಕೆಎಂಸಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ಮಧ್ಯೆಯೇ ನಿತ್ಯ ಪೂಜೆಯಲ್ಲಿ  ತೊಡಗಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೂ ನಿತ್ಯ ಜಪ ಅನುಷ್ಠಾನಗಳಲ್ಲಿ ಪುತ್ತಿಗೆ ಶ್ರೀಗಳು ತೊಡಗಿಸಿಕೊಂಡಿದ್ದಾರೆ.  ಉಡುಪಿ ಮಾತ್ರವಲ್ಲ ಅನೇಕ ಕಡೆ  ಶಾಖಾಮಠ ಹೊಂದಿರುವ ಸ್ವಾಮೀಜಿ ಈ ಬಾರಿ ಉಡುಪಿಯಲ್ಲೇ ಚಾತುರ್ಮಾಸ್ಯ ವೃತ ಕೈಗೊಂಡಿದ್ದರು.

ಚಾತುರ್ಮಾಸ್ಯಕ್ಕೆ ಸಂಕಲ್ಪ ಮಾಡಿದ್ದ ಸಮಯದಲ್ಲಿ ಜ್ವರ ಮತ್ತು ಶೀತದ ಲಕ್ಷಣಗಳು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಪರೀಕ್ಷೆಗೆ ಒಳಗಾಗಿದ್ದು, ಪಾಸಿಟಿವ್ ಬಂದಿತ್ತು. ಬಳಿಕ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಿಪಿಇ ಕಿಟ್ ಧರಿಸಿಕೊಂಡೇ ಶ್ರೀಗಳ ಶಿಷ್ಯರು ಸ್ವಾಮೀಜಿಯ ಪೂಜೆಗೆ ಸಹಕರಿಸುತ್ತಿದ್ದಾರೆ.

ಶ್ರೀಗಳ ಆರೋಗ್ಯ ಚೆನ್ನಾಗಿದೆ. ಇನ್ನು ಒಂದು ವಾರಗಳ ಕಾಲ ಅವರು ಆಸ್ಪತ್ರೆಯಲ್ಲಿ ಇರಬೇಕಾಗಬಹುದು. ಭಕ್ತರು ಆತಂಕಪಡುವ ಅಗತ್ಯ ಇಲ್ಲ ಎಂದು ಕೆಎಂಸಿ ವೈದ್ಯರು ಹೇಳಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top