Connect with us

Dvgsuddi Kannada | online news portal | Kannada news online

ದಾವಣಗೆರೆ: ಕಾಳಿಕಾದೇವಿ ರಸ್ತೆ ಸೀಲ್ ಡೌನ್ ಗೆ ಸ್ಥಳೀಯರು ಆಗ್ರಹಿಸಿದ್ರೂ, ಸೀಲ್ ಡೌನ್ ಮಾಡ್ತಿಲ್ಲ ಯಾಕೆ ಗೊತ್ತಾ..?

ದಾವಣಗೆರೆ

ದಾವಣಗೆರೆ: ಕಾಳಿಕಾದೇವಿ ರಸ್ತೆ ಸೀಲ್ ಡೌನ್ ಗೆ ಸ್ಥಳೀಯರು ಆಗ್ರಹಿಸಿದ್ರೂ, ಸೀಲ್ ಡೌನ್ ಮಾಡ್ತಿಲ್ಲ ಯಾಕೆ ಗೊತ್ತಾ..?

ಡಿವಿಜಿ ಸುದ್ದಿ, ದಾವಣಗೆರೆ:   ನಗರದ ಕಾಳಿಕಾದೇವಿ ರಸ್ತೆಯನ್ನು ಸಂಪೂರ್ಣ ಸೀಲ್ ಡೌನ್ ಮಾಡಬೇಕು ಎಂದು ಚೌಕಿಪೇಟಿಯ ನಿವಾಸಿಗಳು ಆಗ್ರಹಿಸಿದ್ರೂ , ಸೀಲ್ ಡೌನ್ ಮಾಡ್ತಿಲ್ಲ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಚೌಕಿಪೇಟಿ ನಿವಾಸಿ ಆಲೂರು ರಾಜಶೇಖರ್, ನಗರದ ಕಾಳಿಕಾದೇವಿ ರಸ್ತೆಯ ಬಿ.ಎಸ್. ಚನ್ನಬಸಪ್ಪ ಅಂಗಡಿಯಲ್ಲಿ ಕೆಲಸ  ಮಾಡುವ ಆಕೌಂಟರ್ ಗೆ ಕೊರೊನಾ ಕೊರೊನಾ ಪಾಸಿಟಿವ್ ಬಂದು ಸಾವನ್ನಪ್ಪಿದ್ದಾರೆ. ಇತ್ತೀಚೆಗೆ ಅಂಗಡಿಯನ್ನು  ಸೀಲ್ ಡೌನ್ ಮಾಡಿ, ಕೇವಲ ಒಂದುವರೆ ಗಂಟೆಯಲ್ಲಿಯೇ ತೆರವು ಮಾಡಲಾಗಿದೆ. ಇದರ ಹಿಂದೆ ಜಿಲ್ಲಾಡಳಿತಕ್ಕೆ ರಾಜಕೀಯ ಒತ್ತಡ ಇರುವುದು ಸ್ಪಷ್ಟವಾಗುತ್ತದೆ.  ಜಿಲ್ಲಾಡಳಿತ ಬಡವರಿಗೊಂದು ಕಾನೂನು, ಶ್ರೀಮಂತರಿಗೆ ಒಂದು ಕಾನೂನು ಎನ್ನುವಂತಾಗಿದೆ. ಜಿಲ್ಲಾಡಳಿತ ಕೂಡಲೇ ಕಾಳಿಕಾದೇವಿ ರಸ್ತೆ ಸಂಪೂರ್ಣ ಸೀಲ್ ಡೌನ್ ಮಾಡಬೇಕು ಎಂದು ಆಗ್ರಹಿಸಿದರು.

covid 19

ಬಟ್ಟೆ ಅಂಗಡಿಗೆ ಗ್ರಾಮಾಂತರ ಪ್ರದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುವುದರಿಂದ ಸೋಂಕು ಹೆಚ್ಚಾಗುವ ಸಾಧ್ಯತೆ ಹೆಚ್ಚಿದೆ . ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುವ ಯುವಕರಿಗೆ ಕೆಮ್ಮು, ಜ್ವರ, ಶೀತ ಪತ್ತೆಯಾದರೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡದೆ, ಗ್ರಾಮಾಂತರ ಪ್ರದೇಶಕ್ಕೆ ಕಳುಹಿಸಲಾಗುತ್ತಿದೆ. ಇದರಿಂದ ಗ್ರಾಮಾಂತರ ಪ್ರದೇಶದಲ್ಲಿಯೂ  ಇನ್ನಷ್ಟು ಸೋಂಕು ಹರಡುವ ಸಾಧ್ಯತೆ ಇದೆ. ಹೀಗಾಗಿ ಜಿಲ್ಲಾಡಳಿತ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೇ ಕಾಳಿಕಾದೇವಿ ರಸ್ತೆರಯನ್ನು ಸೀಲ್ ಡೌನ್ ಮಾಡಬೇಕು ಜೊತೆಗೆ ಬಿ.ಎಸ್ . ಚನ್ನಬಸಪ್ಪ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಕೊರೊನಾ ತಪಾಸಣೆ ನಡೆಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಇಂಗಳೇಶ್ವರ್, ಸಾವಂರ್ ಜಾಧವ್, ರಾಘವೇಂದ್ರ ಶೆಟ್ಟಿ ಉಪಸ್ಥಿತರಿದ್ದರು.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top