ಡಿವಿಜಿಸುದ್ದಿ, ಚನ್ನಗಿರಿ: ಕೋಗಲೂರು ಗ್ರಾಮದ ಕೃಷಿಪತ್ತಿನ ಸಹಾಕಾರ ಸಂಘದಲ್ಲಿ ನೂತನವಾಗಿ ನ್ಯಾಯಬೆಲೆ ಅಂಗಡಿಯನ್ನು ಶಾಸಕ ಮಾಡಳ್ ವಿರುಪಾಕ್ಷಪ್ಪ ಉದ್ಘಾಟಿಸಿದರು.
ಸಹಾಕಾರ ಸಂಘವನ್ನು ಅಭಿವೃದ್ದಿ ಕಡೆಗೆ ಮುನ್ನೆಡೆಸಲು ಸಂಘದ ಅಧ್ಯಕ್ಷರು ಹಾಗೂ ಸದಸ್ಯರುಗಳು ಸಹಾಕಾರ ನೀಡಬೇಕು. ರಾಜ್ಯದಲ್ಲಿ ಮಾದರಿ ಸಹಾಕಾರ ಸಂಘವಾಗಿ ಗುರಿಸುವಂತಾಗಬೇಕು. ಪಡಿತರ ತೂಕದಲ್ಲಿ ವ್ಯತ್ಯಾಸ ಮಾಡಬಾರದು. ಕೊರೊನಾ ದೇಶದಾದ್ಯಂತ ವ್ಯಾಪಿಸಿದ್ದು, ಗ್ರಾಮೀಣ ಭಾಗದಲ್ಲಿ ಹರಡುತ್ತಿದೆ. ಪ್ರತಿಯೊಬ್ಬರು ಮಾಸ್ಕ್, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಕರೆ ನೀಡಿದರು.

ಅಧ್ಯಕ್ಷ ಹೆಚ್‌ಯು ಮಲ್ಲಿಕಾರ್ಜುನ್ ಮಾತನಾಡಿ, ಸುಮಾರು ವರ್ಷಗಳಿಂದ ಸಹಾಕಾರ ಸಂಘಕ್ಕೆ ನ್ಯಾಯಬೆಲೆ ಅಂಗಡಿಯನ್ನು ಮುಂಜೂರು ಮಾಡುವುದಕ್ಕೆ ಸತತ ಹೋರಾಟ ನಡೆಸಿದ್ದು, ಈ ಬಾರಿ ನ್ಯಾಯಬಲೆ ಅಂಗಡಿ ಶಾಸಕ ಮಾಡಳ್ ವಿರೂಪಾಕ್ಷಪ್ಪ ಅವರು ಕಾರಣವಾಗಿದ್ದಾರೆ. ಅವರಿಗೆ ನಮ್ಮ ಸಂಘವು ಸದ ಚಿರ ಋಣಿಯಾಗಿರುತ್ತದೆ ಎಂದರು.
ಸಂಘದ ನಿರ್ದೇಶಕ ಎಸ್ ಆರ್ ಶಿವಕುಮಾರ್, ಜಿಪಂ ಉಪಾಧ್ಯಕ್ಷೆ ಸಾಕಮ್ಮಗಂಗಾಧರನಾಯ್ಕ ತಾಲೂಕು ಆಹಾರ ನಿರೀಕ್ಷ ಜಯರಾಂ ,ತಾಲೂಕು ನ್ಯಾಯಬೆಲೆ ಅಂಗಡಿಗಳ ಒಕ್ಕೂಟದ ಮಾಲೀಕ ಸಂಘದ ಅಧ್ಯಕ್ಷ ಉಮೇಶ್ , ಡಿಸಿಸಿ ಬ್ಯಾಂಕ್ ನಿರರ್ದೇಶಕ ಸ್ವಾಮಿ , ಪಿಡಿಒ ಶೇರ್ ಆಲಿ , ಪಿಎಲ್‌ಡಿ ಬ್ಯಾಂಕ್ ಮಾಜಿ ಆಧ್ಯಕ್ಷರು ಉಮೇಶ್, ಜಗದೇಶ್ ಕೆಜಿ ಸಹಾಕಾರ ಸಂಘದ ಎಲ್ಲಾ ನಿರ್ದೇಶಕರುಗಳು ಗ್ರಾಮದ ಮುಖಂಡರುಗಳು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.



