ಡಿವಿಜಿ ಸುದ್ದಿ.ಕಾಂ, ದಾವಣಗೆರೆ: 2019-20ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ದಿ ಯೋಜನೆಯಡಿ ಬೆಳೆಗಳಿಗೆ ಬೇಸಿಗೆಯಲ್ಲಿ ನೀರಿನ ಅಭಾವ ತಡೆಗಟ್ಟಲು ನೀರಿನ ಟ್ಯಾಂಕರ್ ಖರೀದಿಸಿದ ಸಾಮಾನ್ಯ ವರ್ಗಕ್ಕೆ ಸೇರಿದ ರೈರಿಗೆ ಶೇ.50 ರಷ್ಟು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವರ್ಗಕ್ಕೆ ಸೇರಿದ ರೈತರಿಗೆ ಶೇ.90 ರಷ್ಟು ಸಹಾಯಧ ನೀಡಲಿದೆ.
2019-20ನೇ ಸಾಲಿನ ನೀರಿನ ಟ್ಯಾಂಕರ್ ಗೆ ಸಹಾಯಧನ ನೀಡಲು ಅನುಷ್ಠಾನ ಮಾರ್ಗಸೂಚಿಯಲ್ಲಿ ನೀರಿನ ಟ್ಯಾಂಕರ್ ನ್ನು ಆರ್ ಟಿಒನಿಂದ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕಾಗಿರುತ್ತದೆ. ಈಗಾಗಲೇ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಿರುವ ರೈತರು ಟ್ಯಾಂಕರ್ ನ್ನು ಅನುಮೋದಿತ ಸಂಸ್ಥೆಗಳಿಂದ ಖರೀದಿಸಿದ ನಂತರ ಆರ್ ಟಿಒ ನೋಂದಣಿ ಮಾಡಿಸಿಕೊಂಡ ನಂತರವೇ ನಿಗದಿಪಡಿಸಿದ ನಿಯಮಾನುಸಾರ ಸಹಾಯಧನಕ್ಕಾಗಿ ಪರಿಗಣಿಸಲಾಗುವುದು.
ಅರ್ಜಿಗಳನ್ನು ಸಲ್ಲಿಸಿರುವ ಆಸಕ್ತ ರೈತರುಗಳು ಟ್ಯಾಂಕರ್ ನ್ನು ಆರ್ ಟಿ ಒ ನೋಂದಣಿ ಮಾಡಿಸಿಕೊಳ್ಳುವ ಬಗ್ಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಖಚಿತಪಡಿಸಿದಲ್ಲಿ ಮತ್ತೊಮ್ಮೆ ಜೇಷ್ಠತೆಯನ್ನು ನಿರ್ವಹಿಸಲು ಸಹಕಾರಿಯಾಗುತ್ತದೆ. ಆದ್ದರಿಂದ ಕೊಡಲೇ ಕಚೇರಿಗೆ ಆಗಮಿಸಿ ತಮ್ಮ ಗ್ರಾಮಕ್ಕೆ ಸಂಬಂಧಿಸಿದ ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿಯನ್ನು ಸಂಪರ್ಕಿಸಬೇಕೆಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಲಕ್ಷ್ಮೀಕಾಂತ್ ಬೊಮ್ಮನ್ನರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.