ಡಿವಿಜಿ ಸುದ್ದಿ, ದಾವಣಗೆರೆ: ಜು.23 ರಂದು ರಂಗನಾಥ ಫೀಡರ್‍ನಲ್ಲಿ ತುರ್ತು ಕಾರ್ಯ ಹಮ್ಮಿಕೊಂಡಿರುವುದರಿಂದ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯಾನಗರ 19, 20, 21 ಮತ್ತು 22ನೇ ಕ್ರಾಸ್‍ಗಳು ಮತ್ತು ಕೊನೆಯ ಬಸ್ ಸ್ಟಾಪ್ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಆನಗೋಡು ಫೀಡರ್ ವ್ಯಾಪ್ತಿಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯವಾಗಲಿದೆ. ಎಚ್. ಕಲ್ಪನಹಳ್ಳಿ, ಹೊನ್ನೂರು, ಮಲ್ಲಶೆಟ್ಟಿಹಳ್ಳಿ-ಕಾರ್ಖಾನೆಗಳು, ಚಟ್ಟೋಬನಹಳ್ಳಿ ಮತ್ತು ಕರಿಲಕ್ಕೇನಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.



