ಡಿವಿಜಿ ಸುದ್ದಿ, ಭದ್ರಾವತಿ: ಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ 2020-21 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳಿಗೆ ಇಂದು (ಜು.22) ಮಧ್ಯರಾತ್ರಿಯಿಂದಲೇ ಡ್ಯಾಂ ಗೇಟ್ ಓಪನ್ ಮಾಡಲಾಗುವುದು ಎಂದು ಕರ್ನಾಟಕ ನೀರಾವ ನಿಗಮ ನಿಯಮಿತಿ ತಿಳಿಸಿದೆ.
ಭದ್ರಾ ಡ್ಯಾಂ ಎಡದಂಡೆ ಹಾಗೂ ಬಲದಂಡೆಯ ನಾಲೆಗಳಿಗೆ ಇಂದು ಮಧ್ಯರಾತ್ರಿಯಿಂದ ನೀರು ಹರಿಯಲಿದೆ. ಈ ಮೂಲಕ ಮುಂಗಾರು ಹಂಗಾಮಿಗೆ ಭತ್ತ ನಾಟಿ ಮಾಡಲು ನೀರಿಗಾಗಿ ಕಾಯುತ್ತಿದ್ದ ರೈತರಲ್ಲಿ ಮುಖದಲ್ಲಿ ಸಂತಸ ಮೂಡಿದೆ.
ಭದ್ರಾ ಡ್ಯಾಂ ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯ ರೈತರ ಜೀವನಾಡಿಯಾಗಿದ್ದು, ಈ ಎರಡು ಜಿಲ್ಲೆಯ ನೀರಾವರಿ ಪ್ರದೇಶಕ್ಕೆ ನೀರು ಒದಗಿಸಲಿದೆ. ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ಮಾತ್ರವಲ್ಲದೆ, ತೆಂಗು, ಅಡಿಕೆ, ಕಬ್ಬು ಮಕ್ಕೆಜೋಳ ಸೇರಿದಂತೆ ಇತರೆ ಬೆಳೆಗಳನ್ನು ಬೆಳೆಯಲಾಗುತ್ತಿದೆ.
ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ 153.2 ರಷ್ಟಿದ್ದು, ಒಳ ಹರಿವು ಸ್ವಲ್ಪ ಇಳಿಕೆಯಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ತಗ್ಗಿದ್ದರಿಂದ ಒಳ ಹರಿವು 3,395 ರಷ್ಟಿದೆ. ಕಳೆದ ವರ್ಷ ಈ ದಿನ 138 ಅಡಿಯಷ್ಟು ನೀರು ಸಂಗ್ರಹವಾಗಿತ್ತು.