ಡಿವಿಜಿ ಸುದ್ದಿ, ಬೆಂಗಳೂರು: ದೇಶದಾದ್ಯಂತ ಒಂದೇ ದಿನ 40,425 ಕೊರೊನಾ ಪಾಸಿಟಿವ್ ಪ್ರಕಣರಳು ಪತ್ತೆಯಾಗಿದ್ದು, ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 11 ಲಕ್ಷ ದಾಟಿದಂತಾದೆ.
ಈ ಬಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದ್ದು, ಸೋಂಕಿನಿಂದ ಒಂದೇ ದಿನದಲ್ಲಿ ದೇಶದಾದ್ಯಂತ 681 ಮಂದಿ ಮೃತಪಟ್ಟಿದ್ದಾರೆ. ಸದ್ಯ ದೇಶದಲ್ಲಿ 3,90,459 ಸಕ್ರಿಯ ಪ್ರಕರಣಗಳಿದ್ದು, 7,00,087 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಒಟ್ಟು 11,18,043 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಸೋಂಕಿನಿಂದ 27,497 ಮಂದಿ ಮೃತಪಟ್ಟಿದ್ದಾರೆ.
ದೇಶದಲ್ಲಿ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 3,10,455 ಲಕ್ಷ ಸೋಂಕು ಪ್ರಕರಣಗಳಿವ. 11,854 ಮಂದಿ ಮೃತಪಟ್ಟಿದ್ದು, 1,29,032 ಸಕ್ರಿಯ ಪ್ರಕರಣಗಳಿವೆ. 1,69,569 ಮಂದಿ ಗುಣಮುಖರಾಗಿದ್ದಾರೆ. ರಾಜಧಾನಿ ದೆಹಲಿಯಲ್ಲಿ 16,031 ಸಕ್ರಿಯ ಪ್ರಕರಣಗಳಿದ್ದು, 1,03,134 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 1,22,793 ಲಕ್ಷ ಸೋಂಕು ಪ್ರಕರಣಗಳು ದಾಖಲಾಗಿವೆ. ಇದುವರೆಗೆ 3,628 ಮಂದಿ ಮೃತಪಟ್ಟಿದ್ದಾರೆ.
ತಮಿಳುನಾಡಿನಲ್ಲಿ 50,297 ಸಕ್ರಿಯ ಪ್ರಕರಣಗಳಿದ್ದು, 1,17,915 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 1,70,693 ಕೊರೊನಾ ಪಾಸಿಟಿವ್ ನಲ್ಲಿ 2,481 ಮಂದಿ ಮೃತಪಟ್ಟಿದ್ಧಾರೆ