ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲಾ ಆಸ್ಪತ್ರೆಗಳು ಹಾಗೂ ಜಿಲ್ಲಾ ಮಟ್ಟದಲ್ಲಿ ಕೊರೊನಾ ವೈರಸ್ ಪ್ರಕರಣಗಳನ್ನು ಸಮರ್ಪಕವಾಗಿ ನಿಭಾಯಿಸಲು ಜಿಲ್ಲೆಯಲ್ಲಿ ತಾತ್ಕಾಲಿಕವಾಗಿ ವೈದ್ಯಕೀಯ ಸೇವೆಯ ಹುದ್ದೆಗಳನ್ನು ಗರಿಷ್ಟ 6 ತಿಂಗಳ ಅವಧಿಗೆ ಗುತ್ತಿಗೆ/ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ನೇರ ಸಂದರ್ಶನ ಕರೆಯಲಾಗಿದೆ.
ಜಿಲ್ಲಾಧಿಕಾರಿಗಳ ಒಪ್ಪಿಗೆ ಮೇರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ನೇರ ಸಂದರ್ಶನ ನಡೆಸಿ ದಾಖಲಾತಿಗಳನ್ನು ಪರಿಶೀಲಿಸಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದಾರೆ. ಅರ್ಹ ವೈದ್ಯರು/ತಜ್ಞವೈದ್ಯರು/ ಅರೆವೈದ್ಯಕೀಯ ಭಾಗವಹಿಸಬಹುದು
ಹುದ್ದೆಗಳ ವಿವರ
ಪಲ್ಮನಾಲೊಜಿಸ್ಟ್ 02
ಜನರಲ್ ಮೆಡಿಸಿನ್ 2
ಎಮೆರ್ಜೆನ್ಸಿ ಮೆಡಿಸಿನ್ 02
ಅನಸ್ತೇಷಿಯಾ 01
ಶುಶ್ರೂಷಕರು 13
ಈ ಸಿಬ್ಬಂದಿಗಳಿಗೆ ಗುತ್ತಿಗೆ ಆಧಾರದ ಮೇಲೆ ಗರಿಷ್ಟ 6 ತಿಂಗಳ ಅವಧಿಗೆ ನೇಮಕಾತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ನೇರ ಸಂದರ್ಶನ ಈ ಹಿಂದೆ ಕರೆಯಲಾಗಿತ್ತು.ಆದರೆ ಸಂದರ್ಶನಕ್ಕೆ ವೈದ್ಯರು ಅವಶ್ಯಕತೆಗನುಗುಣವಾಗಿ ಹಾಜರಾಗದೇ ಇರುವುದರಿಂದ ಜುಲೈ 18 ರಂದು ಬೆಳಿಗ್ಗೆ 11.30 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ, ದಾವಣಗೆರೆ ಇಲ್ಲಿ ಅರ್ಹ ಅಭ್ಯರ್ಥಿಗಳಿಂದ ಕೆಳಕಂಡಂತೆ ನೇರ ಮರು ಸಂದರ್ಶನ ಕರೆಯಲಾಗಿದೆ.
ಅಭ್ಯರ್ಥಿಗಳು ಜುಲೈ 17 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 01.30 ರೊಳಗೆ (ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ, ದಾವಣಗೆರೆ)ಗೆ ಹಾಜರಾಗಿ ಸಂಬಂಧಪಟ್ಟ ವಿಭಾಗದಲ್ಲಿ ವಿದ್ಯಾರ್ಹತೆಯ ಅರ್ಹತಾ ಮೂಲ ದಾಖಲೆಗಳ ಪರಿಶೀಲನೆ ಮಾಡಿಸಿ, ಅರ್ಹತಾ ದಾಖಲೆಗಳ ಒಂದು ಸೆಟ್ ದೃಢೀಕೃತ ಜೆರಾಕ್ಸ್ ಪ್ರತಿಗಳನ್ನು ಸಲ್ಲಿಸಬೇಕೆಂದು ತಿಳಿಸಿದೆ.



