ಡಿವಿಜಿ ಸುದ್ದಿ,ಬೆಂಗಳೂರು: ಕೊರೊನಾದಿಂದ ಗುಣಮುಖರಾದವರು ಪ್ಲಾಸ್ಮಾ ದಾನ ಮಾಡಿದವರಿಗೆ 5 ಸಾವಿರ ಭತ್ಯೆ ನೀಡುವುದಾಗಿ ಸರ್ಕಾರ ಘೋಷಿಸಿದೆ.
ಗುಣಮುಖರಾದವರು 14-28 ದಿನಗಳ ಒಳಗೆ ಒಬ್ಬ ವ್ಯಕ್ತಿ ಒಂದು ಬಾರಿಯಷ್ಟೇ ದಾನ ಮಾಡಲು ಅವಕಾಶವಿದೆ. ದೆಹಲಿಯಲ್ಲಿ ಈಗಾಗಲೇ ಪ್ಲಾಸ್ಮಾ ಬ್ಯಾಂಕ್ ಆರಂಭಿಸಲಾಗಿದ್ದು, ಕೊರೊನಾದಿಂದ ಗುಣಮುಖರಾದವರು ಪ್ಲಾಸ್ಮಾ ದಾನವಾಗಿ ಪಡೆಯುತ್ತಿದ್ದಾರೆ.
ರಾಜ್ಯದಲ್ಲಿ ಕೊರೊನಾ ಇನ್ನಷ್ಟು ಹೆಚ್ಚುವ ಸಾಧ್ಯತೆ ಹಿನ್ನಲೆ ಸರ್ಕಾರ ಕ್ರಮಕ್ಕೆ ಮುಂದಾಗಿದೆ. ವಾರದ ಲಾಕ್ಡೌನ್ ಅವಧಿಯಲ್ಲಿ ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಸರ್ಕಾರ ತರುವ ಯೋಜನೆ ರೂಪಿಸಿದೆ.
ರಾಜ್ಯದಲ್ಲಿ ಇದುವರೆಗೂ 17,390 ಜನ ಕೋವಿಡ್ ಸೋಂಕಿತರು ಗುಣಮುಖ ಹೊಂದಿದ್ದು ಬೆಂಗಳೂರಿನಲ್ಲಿ 4992 ಜನ ಗುಣಮುಖರಾಗಿದ್ದರೆ. ಗುಣಮುಖರಾದವರು ತಮ್ಮ ಪ್ಲಾಸ್ಮಾ ದಾನ ಮಾಡುವ ಮೂಲಕ ಜೀವದಾನ ಮಾಡಬೇಕೆಂದು ಮನವಿ ಮಾಡುತ್ತೇನೆ. ಪ್ಲಾಸ್ಮಾ ದಾನಿಗಳಿಗೆ ಗೌರವಯುತವಾಗಿ 5000 ರೂಪಾಯಿಗಳ ಪ್ರೋತ್ಸಾಹಧನ ನೀಡಲು ನಿರ್ಧರಿಸಲಾಗಿದೆ.@BSYBJP pic.twitter.com/VsHRAxYnuz
— Dr Sudhakar K (@DrSudhakar_) July 15, 2020



