ಡಿವಿಜಿ ಸುದ್ದಿ, ಮೈಸೂರು: ಕೋವಿಡ್ ಸನ್ನಿವೇಶದಲ್ಲಿ ಮನುಷ್ಯತ್ವ ಇರೋರು ದುಡ್ಡು ಹೊಡೆಯಲ್ಲ ಎಂದು ಸಚಿವ ಎಸ್. ಟಿ. ಸೋಮಶೇಖರ್ ವೈದ್ಯಕೀಯ ಉಪಕರಣಗಳ ಖರೀದಿ ಅವ್ಯಹಾರ ಆರೋಪಕ್ಕೆ ತಿರುಗೇಟು ನೀಡಿದರು.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಆರಂಭದಲ್ಲಿ ವೈದ್ಯಕೀಯ ಪರಿಕರಗಳ ಬೆಲೆ ಹೆಚ್ಚಾಗಿದ್ದವು. ಈಗ ಸ್ಪರ್ಧೆ ಕಾರಣದಿಂದ ಬೆಲೆ ಕಡಿಮೆ ಆಗಿದೆ. ಈ ಬಗ್ಗೆ ವಿರೋಧ ಪಕ್ಷದ ನಾಯಕರಿಗೂ ಮಾಹಿತಿ ಇರುತ್ತದೆ ಎಂದರು.
ಸಿದ್ದರಾಮಯ್ಯ ಅವರು ಮೈಸೂರಿನ ತೋಟದ ಮನೆಯಲ್ಲಿ ಕುಳಿತು ಮಾತನಾಡುವುದಲ್ಲ. ವಿಧಾನಸೌಧಕ್ಕೆ ಬಂದು ದಾಖಲೆ ಪರಿಶೀಲನೆ ನಡೆಸಲಿ.ಕೋವಿಡ್‌ಗೆ ಸಂಬಂಧಿಸಿದಂತೆ ಯಾವುದೇ ದಾಖಲೆಯನ್ನು ಸಾರ್ವಜನಿಕರ ಮುಂದೆ ಇಡಲು ಸರ್ಕಾರ ಸಿದ್ಧವಿದೆ ಎಂದು ತಿಳಿಸಿದರು.
ಕಳೆದ ನಾಲ್ಕೈದು ತಿಂಗಳಲ್ಲಿ ರಾಜ್ಯ ಸರ್ಕಾರ ಖರ್ಚು ಮಾಡಿರುವುದು 554 ಕೋಟಿ. ಆದರೆ, ಸಿದ್ದರಾಮಯ್ಯ ಅವರು 2,300 ಕೋಟಿ ಅವ್ಯವಹಾರ ನಡೆದಿದೆ ಎಂದು ಹೇಳಿದ್ದಾರೆ ಎಂದರು.



