ಡಿವಿಜಿ ಸುದ್ದಿ, ಬೆಂಗಳೂರು: ಒಂದು ತಿಂಗಳಿನಿಂದಲೂ ಪ್ರತಿ ವಾರದ ಅಂತ್ಯದಲ್ಲೂ ವಿಶ್ವದ ನಾನಾ ಭಾಗದಲ್ಲಿರುವ ಕನ್ನಡಿಗರ ಜತೆ ನೇರ ಮಾತುಕತೆ ನಡೆಸುತ್ತಲೇ ಬಂದಿದ್ದ ನಟ ಕಿಚ್ಚ ಸುದೀಪ್ ನಾಳೆ ಮತ್ತು ನಾಡಿದ್ದು ಮತ್ತೊಮ್ಮೆ ಅಭಿಮಾನಿಗಳ ಜೊತೆ ಸಂವಾದ ನಡೆಸಲಿದ್ದಾರೆ.
ಜು. 11 (ಶನಿವಾರ) ಮತ್ತು 12 (ಭಾನುವಾರ) ರಾತ್ರಿ 8ರಿಂದ 10 ಗಂಟೆಯವರೆಗೆ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ತಮ್ಮ ಅಭಿಮಾನಿಗಳ ಜತೆ ಸಂವಾದ ನಡೆಸಲಿದ್ದಾರೆ. ಇದು ರಾಜ್ಯದಲ್ಲಿನ ಸುದೀಪ್ ಅವರ ಅಭಿಮಾನಿ ಖುಷಿ ನೀಡಿದೆ.
ಅಭಿಮಾನಿಗಳು ಇಲ್ಲಿ ಸುದೀಪ್ ಎದುರು ತಮ್ಮ ಪ್ರತಿಭೆ ಪ್ರದರ್ಶಿಸುವ ಅಪರೂಪದ ಅವಕಾಶವೂ ಇದೆ. ಸದ್ಯ ಕೊರೊನಾದಿಂದಾಗಿ ಚಿತ್ರಮಂದಿರಗಳು ಮುಚ್ಚಿರುವುದರಿಂದ ತಮ್ಮ ಮೆಚ್ಚಿನ ನಟನನ್ನು ತೆರೆಯ ಮೇಲೆ ನೋಡಬೇಕೆಂಬ ಅಭಿಮಾನಿಗಳ ಆಸೆ ಸದ್ಯಕ್ಕೆ ಈಡೇರುವಂತಿಲ್ಲ. ಹಾಗಾಗಿ ಅಭಿಮಾನಿಗಳಿಗಾಗಿ ಸುದೀಪ್ ತಾವೇ ಅವರನ್ನು ಆನ್ಲೈನ್ ಮೂಲಕ ನೇರ ಭೇಟಿ ಮಾಡಿ, ಅವರ ಜತೆ ಒಂದಿಷ್ಟು ಸಂವಾದ ನಡೆಸಲಿದ್ದಾರೆ.

ಈ ಸಂವಾದ ಮೂಲಕ ಕೊರೊನಾವನ್ನು ಧೈರ್ಯವಾಗಿ ಎಲ್ಲರೂ ಒಗ್ಗಟ್ಟಾಗಿ ಎದುರಿಸೋಣ ಎಂಬ ಸಂದೇಶ ರವಾನಿಸಲು ಮುಂದಾಗಿದ್ದಾರೆ. ಸುದೀಪ್ ಅವರ ಜೊತೆಗೆ ಮಾತನಾಡಲು ಇಚ್ಛಿಸುವವರು ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗಿದೆ.



