Connect with us

Dvgsuddi Kannada | online news portal | Kannada news online

ದಾವಣಗೆರೆ: ಇಂದು 40 ಕೊರೊನಾ ಪಾಸಿಟಿವ್ ; ದಾವಣಗೆರೆ 23, ಹೊನ್ನಾಳಿ 15, ಚನ್ನಗಿರಿ1, ಹರಿಹರ 1 ಕೇಸ್

ಪ್ರಮುಖ ಸುದ್ದಿ

ದಾವಣಗೆರೆ: ಇಂದು 40 ಕೊರೊನಾ ಪಾಸಿಟಿವ್ ; ದಾವಣಗೆರೆ 23, ಹೊನ್ನಾಳಿ 15, ಚನ್ನಗಿರಿ1, ಹರಿಹರ 1 ಕೇಸ್

ಡಿವಿಜಿ ಸುದ್ದಿ, ದಾವಣಗೆರೆ:  ದಾವಣಗೆರೆಯಲ್ಲಿಂದು ಬರೋಬ್ಬರಿ 40 ಕೊರೊನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದ್ದು,  ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 443ಕ್ಕೆ ಏರಿಕೆಯಾಗಿದೆ. ದಾವಣಗೆರೆ ನಗರ ಒಂದರಲ್ಲಿಯೇ 23 , ಹೊನ್ನಾಳಿ ತಾಲ್ಲೂಕಿನಲ್ಲಿ 15, ಚನ್ನಗಿರಿ ತಾಲ್ಲೂಕಿನಲ್ಲಿ 01 , ಹರಿಹರ ತಾಲ್ಲೂಕಿನಲ್ಲಿ 1 ಕೇಸ್ ಗಳು ಪತ್ತೆಯಾಗಿವೆ.

ದಾವಣಗೆರೆ ಜಿಲ್ಲೆಯಲ್ಲಿಂದು  ದಾಖಲೆ ಪ್ರಮಾಣದಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, ಒಂದೇ ದಿನ 40 ಕೇಸ್ ಗಳು ಪತ್ತೆಯಾಗಿವೆ. ಇದರಲ್ಲಿ ದಾವಣಗೆರೆ ನಗರ ಮತ್ತು ತಾಲ್ಲೂಕಿಗೆ ಸಂಬಂಧಿಸಿದಂತೆ  23 ಕೇಸ್ ದೃಢಪಟ್ಟಿವೆ.

ದಾವಣಗೆರೆನಗರದ ಸರಸ್ವತಿನಗರ,  ಆರ್ನೆಕಲ್ಲು, ಶ್ರೀನಿವಾಸನಗರ ಹದಡಿ ರಸ್ತೆ, ಬಸಾಪುರ, ಬಂಬು ಬಜಾರ್ ಬಾಷಾನಗರ, ಶಿವಕುಮಾರಸ್ವಾಮಿ ಬಡಾವಣೆ, ವಿದ್ಯಾನಗರ 10 ನೇ ಕ್ರಾಸ್, ಕೊಂಡಜ್ಜಿ ರಸ್ತೆ ವಿನೋಬನಗರ, 4 ನೇ ಕ್ರಾಸ್ ಅಶೋಕನಗರ, ಕೆಬಿ ಬಡಾವಣೆ, ಪಿಜೆ ಬಡಾವಣೆ 1 ಮೇನ್, ತರಳಬಾಳು ಬಡಾವಣೆ 10 ನೇ ಕ್ರಾಸ್, ಗೊಲ್ಲರಹಳ್ಳಿ, ವಿನೋಬನಗರ ಮೇನ್ ರೋಡ್, ಕೆಟಿಜೆ ನಗರ 2 ನೇ ಮೇನ್, ಕೆ.ಆರ್ ರೋಡ್, ಶೇಖರಪ್ಪ  ಚರ್ಚ್ ರೋಡ್ ನಗರದಲ್ಲಿ ಕೊರೊನಾ ಕೇಸ್ ಗಳು ಪತ್ತೆಯಾಗಿವೆ.

corona 1

ಹೊನ್ನಾಳ್ಳಿಯಲ್ಲಿ ಇಂದು 15 ಕೊರೊನಾ ಪಾಸಿಟಿವ್ ಪತ್ತೆಯಾಗಿವೆ. ಹೊನ್ನಾಳಿಯ ಕೋಟೆ ರಸ್ತೆ, ಸಂತೆ ಮೈದಾನ, ಬಾಲರಾಜಘಟ್,ಹಳೇ ಪೇಟೆ, ಟಿಎಂ ರೋಡ್, ದೊಡ್ಡನಗರ, ಪೋರ್ಡ್ ಏರಿಯಾದಲ್ಲಿ ಪಾಸಿಟಿವ್ ಪತ್ತೆಯಾಗಿದೆ.  ಹರಿಹರದ ಒಂದು ಪಾಸಿಟಿವ್ ಪತ್ತೆಯಾಗಿದ್ದು,  ಎಳೆಹೊಳೆ ಗ್ರಾಮ ದೃಢಪಟ್ಟಿದೆ.  ಚನ್ನಗಿರಿಯ ತಾಲ್ಲೂಕಿನಲ್ಲಿ 01 ಪತ್ತೆಯಾಗಿದ್ದು,  ದಿಗ್ಗೇನಹಳ್ಳಿ ಗ್ರಾಮದಲ್ಲಿ ಸೋಂಕು ದೃಢಪಟ್ಟಿದೆ.

ಇಂದು 4 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, 328 ಮಂದಿ ಗುಣಮುಖರಾಗಿದ್ದಾರೆ. ಕಂಟೈನ್ ಮೆಂಟ್ ಜೋನ್ ನ 73 ವರ್ಷದ ವೃದ್ಧ ಸಾವನ್ನಪ್ಪಿದ್ದಾರೆ.  ಒಟ್ಟು ಜಿಲ್ಲೆಯಲ್ಲಿ 14 ಮಂದಿ ಸಾವನ್ನಪ್ಪಿದ್ದು, ಇನ್ನು 81 ಸಕ್ರಿಯ ಕೇಸ್ ಗಳಿವೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top