ಡಿವಿಜಿ ಸುದ್ದಿ, ಬೆಂಗಳೂರು: ದೇಶದಾದ್ಯಂತ ಒಂದೇ ದಿನ 24,879 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ದೇಶದಲ್ಲಿ ಸೋಂಕಿತರ ಸಂಖ್ಯೆ 7,67,296ಕ್ಕೆ ಏರಿಕೆಯಾಗಿದೆ.
ದೇಶದಲ್ಲಿ ಕೊರೊನಾ ಸೋಂಕಿನಿಂದ ಒಂದೇ ದಿನ 487 ಮಂದಿ ಈವರೆಗೆ 21,129 ಮಂದಿ ಮೃತಪಟ್ಟಿದ್ದಾರೆ. 2,69,789 ಮಂದಿ ದೇಶದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಹಾಗೂ 4,76,378 ಜನ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ದೇಶದ ಹೊಸ ಹಾಟ್‌ಸ್ಪಾಟ್‌ಗಳಾಗಿ ಬಿಂಬಿತವಾಗುತ್ತಿರುವ ತೆಲಂಗಾಣ ಮತ್ತು ಕರ್ನಾಟಕದಲ್ಲಿ ಸೋಂಕು ಪ್ರಕರಣಗಳು ಏರಿಕೆಯಾಗಿದೆ. ಕರ್ನಾಟಕದಲ್ಲಿ ಒಟ್ಟು 28,877 ಪ್ರಕರಣಗಳು ದಾಖಲಾಗಿದ್ದು, 470 ಮಂದಿ ಸಾವಿಗೀಡಾಗಿದ್ದಾರೆ. ಪ್ರಸ್ತುತ 16,531 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. 11,876 ಮಂದಿ ಗುಣಮುಖರಾಗಿದ್ದಾರೆ. ತೆಲಂಗಾಣದಲ್ಲಿ 11,933 ಸಕ್ರಿಯ ಪ್ರಕರಣಗಳಿದ್ದು, 17,279 ಗುಣಮುಖರಾಗಿದ್ದಾರೆ. ಒಟ್ಟು 29,536 ಪ್ರಕರಣಗಳು ದಾಖಲಾಗಿದ್ದು, 324 ಮಂದಿ ಸಾವಿಗೀಡಾಗಿದ್ದಾರೆ. ಮಿಳುನಾಡಿನಲ್ಲಿ 1,22,350, ದೆಹಲಿಯಲ್ಲಿ 1,04,864 ಮಂದಿಗೆ ಸೋಂಕು ತಗುಲಿದೆ.
#IndiaFightsCorona:#COVID19 India UPDATE:
▪️ Total Cases – 767,296
▪️Active Cases – 269,789
▪️Cured/Discharged- 476,377
▪️Deaths – 21,129
▪️Migrated – 1as on July 09, 2020 till 8:00 AM pic.twitter.com/BOioF4LkhG
— #IndiaFightsCorona (@COVIDNewsByMIB) July 9, 2020



