ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿಂದು 18 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 13 ಮಂದಿ ಸಂಪೂರ್ಣ ಗುಣಮುಖರಾಗಿ ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಜಿಲ್ಲೆಯಲ್ಲಿ 383 ಪ್ರಕರಣಗಳು ದಾಖಲಾಗಿದ್ದು. ಈ ಪೈಕಿ 324 ಜನರು ಸಂಪೂರ್ಣ ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ, 13 ಸಾವು ಸಂಭವಿಸಿದ್ದು ಪ್ರಸ್ತುತ್ತ 46 ಸಕ್ರಿಯ ಪ್ರಕರಣಗಳು ಇವೆ.
ಇಂದು ಹರಿಹರ 4, ಚನ್ನಗಿರಿ 3, ಹೊನ್ನಾಳಿ 2, ಕೊಂಡಜ್ಜಿ 01, ದಾವಣಗೆರೆಯ ವಿವೇಕಾನಂದ ಬಡಾವಣೆ 01, ನರಸರಾಜ ಪೇಟೆ 01, ವಿಜಯ ನಗರ 01, ವಿನಾಯಕ ಬಡಾವಣೆ 01, ಬಾಷಾನಗರ 01, ಎಂಸಿಸಿ ಬಿ ಬ್ಲಾಕ್ 01, ಪಿಜೆ ಬಡಾವಣೆ 02 ಪ್ರಕರಣ ಪತ್ತೆಯಾಗಿವೆ.



