ಡಿವಿಜಿ ಸುದ್ದಿ, ದಾವಣಗೆರೆ : ದಾವಣಗೆರೆ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣೆ ಕೆಲಸಗಳನ್ನು ಹಮ್ಮಿಕೊಂಡಿರುವುದರಿಂದ ಎಸ್‍ವಿಟಿ, ಎಂಸಿಸಿ’ಬಿ’, ಡಿಸಿಎಂ, ಜಿ&ಎಸ್, ಕೆಟಿಜೆ, ಮೌನೇಶ್ವರ ಬಿ.ಟಿ, ಫೀಡರ್ ಗಳ ಮಾರ್ಗಗಳಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ನಗರದ ಹದಡಿ ರಸ್ತೆ, ಶ್ರೀನಿವಾಸ್ ನಗರ, ಆಂಜನೇಯ ಬಡಾವಣೆ, ಎಮ್‍ಸಿಸಿ’ಬಿ ಬ್ಲಾಕ್, ಜಯನಗರ, ಮೌನೇಶ್ವರ ಬಡಾವಣೆ, ಶಕ್ತಿನಗರ, ಡಿಸಿಎಂ ಟೌನ್‍ಶಿಪ್, ಲೆನಿನ್ ನಗರ, ಲೇಬರ್ ಕಾಲೋನಿ, ಭಗತ್ ಸಿಂಗ್ ನಗರ, ಕೆಟಿಜೆ ನಗಸಿದ್ಧವೀರಪ್ಪ ಬಡಾವಣೆ, ತ್ರಿಶೂಲ್ ಕಲಾಭವನ ಸುತ್ತಮುತ್ತ, ಕುವೆಂಪು ನಗರ, ಕೊಟ್ಟೂರೇಶ್ವರ ಬಡಾವಣೆ, ಕೆಬಿ ಬಡಾವಣೆ, ಗಣೇಶ್ ಲೇಔಟ್, ಕೆಎಸ್‍ಆರ್‍ಟಿಸಿ ಬಸ್‍ಸ್ಟ್ಯಾಂಡ್ ಸುತ್ತಮುತ್ತ, ಮಂಡಕ್ಕಿ ಭಟ್ಟಿ, ಅಜಾದ್ ನಗರ, ಬಾಷನಗರ, ಅಹ್ಮದ್ ನಗರ, ಮುಸ್ತಾಫಾ ನಗರ ಸುತ್ತಮುತ್ತ ಹಾಗೂ ಇತರೆ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಆದ್ದರಿಂದ ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ತಿಳಿಸಿದೆ.



